ಕಾಸರಗೋಡು: ಜಿಲ್ಲಾ 'ಕನಿವ್' ಪ್ಯಾಲಿಯೇಟಿವ್ ಚಾರಿಟೇಬಲ್ ಸೊಸೈಟಿ ಕಾಸರಗೋಡು ವಲಯ ಸಮಿತಿಯ ನೇತೃತ್ವದಲ್ಲಿ ಆರಂಭಿಸಲಾದ ಹೋಮ್ ಕೇರ್ ವಾಹನದ ಉದ್ಘಾಟನೆ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಜರುಗಿತು.
ಶಾಸಕ ಎನ್.ಎ ನೆಲ್ಲಿಕುನ್ನು ಹಸಿರು ನಿಶಾನಿ ತೋರಿಸುವ ಮೂಲಕ ಉದ್ಘಾಟಿಸಿದರು. ಕನಿವ್ ಸಮನ್ವಯ ಕಾರ್ಯದರ್ಶಿ ಪಿ.ವಿ. ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರ ಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ, ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಟಿ.ಕೆ.ರಾಜನ್, ಕೆ.ಎ.ಮುಹಮ್ಮದ್ ಹನೀಫಾ, ಜಿಲ್ಲಾ ಕನಿವ್ ಪ್ಯಾಲಿಯೇಟಿವ್ ಚಾರಿಟೇಬಲ್ ಸೊಸೈಟಿಯ ಜಿಲ್ಲಾ ಕಾರ್ಯದರ್ಶಿ ಪಿ.ಪಿ.ಸುಕುಮಾರನ್, ಜಿಲ್ಲಾ ಕೋಶಾಧಿಕಾರಿ ಎ.ಎಂ. ಅಬ್ದುಲ್ ಖಾದರ್, ಜಿಲ್ಲಾ ಸಮಿತಿ ಸದಸ್ಯೆ ಸಿ. ಶಾಂತಾ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು. 'ಕನಿವ್' ಕಾಸರಗೋಡು ವಲಯ ಸಮಿತಿ ಕಾರ್ಯದರ್ಶಿ ಕೆ.ಕಮಲಾಕ್ಷನ್ ಸ್ವಾಗತಿಸಿದರು. ವಲಯಾಧ್ಯಕ್ಷ ಕೆ.ಗಂಗಾಧರನ್ ವಂದಿಸಿದರು.




