ಕಾಸರಗೋಡು: ರಾಜ್ಯಮಟ್ಟದ ಕ್ರೀಡಾ ಪ್ರತಿಭೆ ಕಬಡ್ಡಿ ಚಾಂಪಿಯನ್ ಕೂಡ್ಲಿನ ವಸಂತ ಹಾಗು ದೀಪಾ ದಂಪತಿಗಳ ಸುಪುತ್ರಿ ದೀಕ್ಷಾ ವಿ ಇವಳಿಗೆ ಕಾಸರಗೋಡಿನ ಪ್ರತಿಷ್ಠಿತ ಸಾಮಾಜಿಕ ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇವರು ರಂಗಚಿನ್ನಾರಿ ಯುವ ಪ್ರಶಸ್ತಿನೀಡಿ ಗೌರವಿಸಿತು.
ಈಕೆ ನೇಪಾಳದಲ್ಲಿ ಜರಗಿದ ಇಂಡೋ-ನೇಪಾಳ್ ಓಪನ್‍ಇಂಟರ್ ನೇಶನಲ್ ತೈಕೊಂಡಾ ಚಾಂಪಿಯನ್ ಶಿಪ್-2023 ಇದರಲ್ಲಿ ಚಿನ್ನದ ಪದಕ, ಎರ್ನಾಕುಳಂನಲ್ಲಿ ನಡೆದ ಕೇರಳ ರಾಜ್ಯಮಟ್ಟದ ಶಾಲಾ ತೈಕೊಂಡಾ ಚಾಂಪಿಯನ್ ಶಿಪ್ 2024-25 ಇದರಲ್ಲಿ ಚಿನ್ನದ ಪದಕ, ಮಧ್ಯಪ್ರದೇಶದ ದೇವಾಸ್‍ನಲ್ಲಿ ನಡೆದ 68ನೇಯ ರಾಷ್ಟ್ರ ಮಟ್ಟದ ಶಾಲಾ ತೈಕೊಂಡಾ ಚಾಂಪಿಯನ್‍ಶಿಪ್ 2024-25ರಲ್ಲಿ ಭಾಗವಸುವಿಕೆ, ಎರ್ನಾಕುಳಂನಲ್ಲಿ ನಡೆದ ಕೇರಳ ಶಾಲಾ ಶಿಪ್ 2024-25 ಇದರಲ್ಲಿ ಕಂಚಿನ ಪದಕ, ಪಾಲಕ್ಕಾಡಿನಲ್ಲಿ ನಡೆದ ಕೇರಳ ರಾಜ್ಯಮಟ್ಟದ ಶಾಲಾ ಕಬಡ್ಡಿ ಚಾಂಪಿಯನ್ ಶಿಪ್ 2023-24 ಇದರಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾಳೆ. ಇವಳಿಗೆ ಪದ್ಮಗಿರಿ ಕಲಾ ಕುಠೀರದಲ್ಲಿ ಜರಗಿದ ರಂಗಚಿನ್ನಾರಿಯ ಹತ್ತೊಂಬತ್ತನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಡನೀರು ಮಠಾಧಿಪತಿಗಳಾದ ಶ್ರೀಶ್ರೀ ಸಚ್ಚಿದಾನಂದ ಸ್ವಾಮೀಜಿ ಶಾಲುಹೊದಿಸಿ ಫಲ ಮಂತ್ರಾಕ್ಷತೆನೀಡಿ ಅನುಗ್ರಹಿಸಿದರು.
ಸಮಾರಂಭದ ಅಧ್ಯಕ್ಷರಾದ ಧಾರ್ಮಿಕ ಮುಂದಾಳು ಡಾ ಅನಂತಕಾಮತ್, ಅತಿಥಿಗಳಾದ ಖ್ಯಾತ ಪತ್ರಕರ್ತ ರವೀಂದ್ರ ಜೋಶಿ, ನಾರಿ ಚಿನ್ನಾರಿ ಅಧ್ಯಕ್ಷೆ ಸವಿತಾ ಟೀಚರ್ ರಂಗಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನ, ಕೋಳಾರು ಸತೀಶ್ಚಂದ್ರ ಭಂಡಾರಿ, ಸತ್ಯನಾರಾಯಣ ಇವರೆಲ್ಲರೂ ಸೇರಿ ಹಾರಾರ್ಪಣೆ, ಪೇಟ, ಸ್ಮರಣಿಕೆ, ರಂಗಚಿನ್ನಾರಿ ಯುವಪ್ರಶಸ್ತಿ ಸನ್ಮಾನ ಪತ್ರ, ಫಲಪುಷ್ಪ ನಗದು ನೀಡಿ ಗೌರವಿಸಿದರು. ರಂಗಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನ ಸ್ವಾಗತಿಸಿ ವಂದಿಸಿದರು.







