ತಿರುಪತಿ: ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಅವರು ತಿರುಪತಿಯ ವೆಂಕಟೇಶ್ವರ ದೇಗುಲಕ್ಕೆ ಎರಡು ಬೆಳ್ಳಿಯ ದೀಪಗಳನ್ನು ಸೋಮವಾರ ಕೊಡುಗೆಯಾಗಿ ನೀಡಿದ್ದಾರೆ. ಪ್ರತಿ ದೀಪ 50 ಕೆ.ಜಿ ತೂಕವಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ತಿಳಿಸಿದೆ.
ಇವು ಗರ್ಭಗುಡಿಯಲ್ಲಿ ಇರಿಸುವ ಸಾಂಪ್ರದಾಯಿಕ ದೀಪಗಳಾಗಿದ್ದು, ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಅವರ ಸಮ್ಮುಖದಲ್ಲಿ ಪ್ರಮೋದಾ ದೇವಿ ಅವರು ದೀಪಗಳನ್ನು ನೀಡಿದ್ದಾರೆ.
300 ವರ್ಷಗಳ ಹಿಂದೆ ಮೈಸೂರು ರಾಜರು ಕೂಡ ದೀಪಗಳನ್ನು ಕೊಡುಗೆಯಾಗಿ ನೀಡಿದ್ದರು ಎಂದು ಟಿಟಿಡಿ ತಿಳಿಸಿದೆ.




