ಮಾಸ್ಕೊ: ರಷ್ಯಾ ಮತ್ತು ಉಕ್ರೇನ್ ನಡುವಿನ ಮೂರು ವರ್ಷಗಳ ಯುದ್ಧ ಅಂತ್ಯಗೊಳಿಸುವ ಕುರಿತಂತೆ ನೇರ ಮಾತುಕತೆಗೆ ಯಾವುದೇ ಸಭೆ ನಿಗದಿಯಾಗಿಲ್ಲ ಎಂದು ರಷ್ಯಾ ಗುರುವಾರ ತಿಳಿಸಿದೆ.
2022ರಲ್ಲಿ ಯುದ್ಧ ಆರಂಭವಾಗಿದೆ. 'ಶೀಘ್ರ ಕದನವಿರಾಮ ಮೂಡಲಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಹಿಂದೆ, ವಾರದ ಹಿಂದಷ್ಟೇ ಉಭಯ ದೇಶಗಳ ನಿಯೋಗ ಚರ್ಚಿಸಿದ್ದವು.
'ಮುಂದಿನ ಸಭೆ ಕುರಿತು ಸ್ಪಷ್ಟ ನಿರ್ಧಾರ ಮೂಡಿಲ್ಲ. ಈ ಬಗ್ಗೆ ಇನ್ನಷ್ಟೇ ಚಿಂತನೆ ನಡೆಯಬೇಕಾಗಿದೆ' ಎಂದು ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೊವ್ ಅವರು ಪ್ರತಿಕ್ರಿಯಿಸಿದ್ದಾರೆ.




