ಕುಂಬಳೆ: ಕೇರಳ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ರಾಜ್ಯ ಸಮಾವೇಶ ನಾಳೆ(ಮೇ 5) ಸೋಮವಾರ ಪಾಳಯಂ ಸದಾಶಿವನ್ ನಾಯರ್ ಕೆಎಸ್ ಟಿ ಎ ಮಂದಿರದಲ್ಲಿ ನಡೆಯಲಿದೆ. ಕೆ ಎಸ್ ಟಿ ಎ ರಾಜ್ಯ ಅಧ್ಯಕ್ಷ ಸುದರ್ಶನನ್ ಉದ್ಘಾಟಿಸಲಿದ್ದಾರೆ. ರಾಜ್ಯ ಉಪಾಧ್ಯಕ್ಷರಾದ ಪಿವಿ ಜೇಕಬ್ ಅಧ್ಯಕ್ಷತೆ ವಹಿಸುವರು. ಸಮಾವೇಶದಲ್ಲಿ ಚಿಕಿತ್ಸಾ ಸಹಾಯ ವಿತರಣೆ, ನಗದು ಬಹುಮಾನ ವಿತರಣೆ ಮೊದಲಾದ ಕಾರ್ಯಕ್ರಮಗಳು ಜರಗಲಿವೆ ಎಂದು ಕೆ ಎಸ್ ಟಿ ಎ ರಾಜ್ಯ ಕಾರ್ಯದರ್ಶಿ ಕುಂಬಳೆಯ ಮೋಹನ್ಸ್ ಟೈಲರಿಂಗ್ ನ ಮಾಲಕರಾದ ಮೋಹನ್ ದಾಸ ತಿಳಿಸಿದ್ದಾರೆ.




