ಮಂಜೇಶ್ವರ: ಶ್ರೀ ಕ್ಷೇತ್ರ ಬ್ರಹ್ಮೇಶ್ವರ ರಾಮಾಂಜನೇಯ ಕಣ್ವತೀರ್ಥ ಮಠದಲ್ಲಿ ಶ್ರೀ ಪೇಜಾವರ ಅಧೋಕ್ಷಜ ಮಠದ ೀಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಾಂಗಳರವರು ಅಕ್ಷಯ ತೃತೀಯದ ಭಾಗವಾಗಿ ಕ್ಷೇತ್ರದಲ್ಲಿ ಪೀಠ ಪೂಜೆಯನ್ನು ನಡೆಸಿ ಭಾಗವತ ಸಪ್ತಾಹದ ಬಗ್ಗೆ ಪ್ರವಚನಗಳನ್ನು ನಡೆಸಿದರು. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಗುರುರಾಜ ಕಲ್ಲೂರಾಯ,ಸಂಸ್ಕøತ ಶಿಕ್ಷಕ ರಾಪೆÇೀತ್ತಮ ಆಚಾರ್, ಉತ್ತರಾಧಿ ಮಠದ ಸುಧಾಮ ಪಂಡಿತ ಹರೀಶ್ ಆಚಾರ್ ಭಾಗವತ ಪ್ರವಚನ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ರಮೇಶ್ ಪೆಜತ್ತಾಯ ಉಡುಪಿ, ಕಣ್ವತೀರ್ಥ ಕ್ಷೇತ್ರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗೋಪಾಲ ಶೆಟ್ಟಿ ಆರಿಬೈಲು ಮತ್ತು ಅಪಾರ ಸಂಖ್ಯೆಯ ಭಕ್ತಾದಿಗಳು ಅಕ್ಷಯ ತೃತೀಯದ ಪ್ರಯುಕ್ತ ನಡೆದ ವಿಜಯ ಧ್ವಜ ತೀರ್ಥರ ಆರಾಧನೆ ಮತ್ತು ದೇವರ ಮಹಾಪೂಜೆಯಲ್ಲಿ ಭಾಗವಹಿಸಿ ಶ್ರೀ ಪಾದಾಂಗಳರವರ ಮಂತ್ರಾಕ್ಷತೆ ಆಶೀರ್ವಾದವನ್ನು ಪಡೆದು ಪುನೀತರಾದರು.




.jpg)
