ಆಪರೇಷನ್ ಸಿಂಧೂರದ ನಂತರ ಭಯೋತ್ಪಾದನೆಯ ವಿರುದ್ಧ ಭಾರತದ ಸಂದೇಶವನ್ನು ತಲುಪಿಸಲು ಇತರೆ
30 ದೇಶಗಳಿಗೆ ಭೇಟಿ ನೀಡಲಿರುವ ಈ ಸರ್ವಪಕ್ಷ ನಿಯೋಗದಿಂದ ಪಠಾಣ್ ಹೊರನಡೆದ ಕೆಲವೇ ಗಂಟೆಗಳ ನಂತರ ಬಿಜೆಪಿ ಈ ಆರೋಪ ಮಾಡಿದೆ.
ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರ ಈ ನಿಯೋಗದ ಸದಸ್ಯರ ಹೆಸರುಗಳನ್ನು ಅಂತಿಮಗೊಳಿಸುವ ಮೊದಲು ತಮ್ಮ ಪಕ್ಷದೊಂದಿಗೆ ಸಮಾಲೋಚಿಸದೇ ಇರುವುದರಿಂದ ತಮ್ಮ ಯಾವುದೇ ಸಂಸದರು ಈ ತಂಡದ ಭಾಗವಾಗುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಘೋಷಿಸಿದೆ.
ಟಿಎಂಸಿ ಸಂಸದರನ್ನು ಸರ್ವಪಕ್ಷ ನಿಯೋಗದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿರ್ಧಾರ ದುರದೃಷ್ಟಕರ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಹ-ಪ್ರಭಾರಿ ಅಮಿತ್ ಮಾಳವೀಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.




