ಬದಿಯಡ್ಕ: ಭಾರೀ ಮಳೆ ಮತ್ತು ಗಾಳಿಗೆ ಮರವೊಂದು ಮನೆ ಛಾವಣಿಗೆ ಉರುಳಿ ಬಿದ್ದ ಘಟನೆ ವರದಿಯಾಗಿದೆ. ಆದರೆ ಯಾವುದೇ ಅನಾಹುತ ಸಂಭವಿಸಲಿಲ್ಲ. ಬುಧವಾರ ಬೆಳಿಗ್ಗೆ 10:30 ರ ಸುಮಾರಿಗೆ ಬಿದ್ದ ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ನೀರ್ಚಾಲು ಸಮೀಪದ ಕನ್ನೆಪ್ಪಾಡಿಯ ವ್ಯಾಪಾರಿ ಮತ್ತು ಪತ್ರಿಕೆ ವಿತರಕ ರಶೀದ್ ಎಂಬವರ ಮನೆಗೆ ಘಟನೆಯಿಂದ ಹಾನಿಯಾಗಿದೆ.
ಮನೆಯ ಬಳಿ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಮರ ಬಿದ್ದಾಗ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಅನಾಹುತ ತಪ್ಪಿದೆ. ಮಾಹಿತಿ ಸಿಕ್ಕ ನಂತರ ಕೆಎಸ್ಇಬಿ ಅಧಿಕೃತರು ಆಗಮಿಸಿ ದುರಸ್ತ್ಥಿ ನಡೆಸಿದರು.
ಕುಂಬಳೆ: ಇಲ್ಲಿಯ ಭಾಸ್ಕರ ನಗರದಲ್ಲಿ ನಿವೃತ್ತ ಎಸ್‌ಐ ಮನೆಯ ಮೇಲೆ ಮರ ಬಿದ್ದಿದೆ. ನಿವೃತ್ತ ಎಸ್ ಸುರೇಶನ ಮನೆಯ ಮೇಲೆ ಮರ ಬಿದ್ದಿದೆ. ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದೆ.ಅದೃಷ್ಟವಶಾತ್ ಯಾವುದೇ ಅವಘಡ ಉಂಟಾಗದೆ ಪಾರಾಗಲಾಗಿದೆ.
ಜಿಲ್ಲೆಯ ಹಲವೆಡೆ ಸಣ್ಣ ಪುಟ್ಟ ಮಳೆ ಹಾನಿಗಳು ವರದಿಯಾಗಿವೆ.




