HEALTH TIPS

ದುಬೈ ಸಂಸ್ಥೆ ರಾತ್ರೋರಾತ್ರಿ ಮಾಯ: ಭಾರತೀಯರು ಸೇರಿದಂತೆ ಹಲವರಿಗೆ ಲಕ್ಷ ಲಕ್ಷ ಪಂಗನಾಮ

ಯು.ಎ.ಇ.: ದುಬೈ ದೇಶದ ಸಂಸ್ಥೆಯೊಂದು ರಾತ್ರೋರಾತ್ರಿ ಮಂಗಮಾಯವಾಗಿದ್ದು, ಭಾರತೀಯರು ಸೇರಿದಂತೆ ಸಾವಿರಾರು ಹೂಡಿಕೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಯುಎಇ ಮೂಲದ ಗಲ್ಫ್ ಫಸ್ಟ್ ಮತ್ತು ಸಿಗ್ಮಾ-ಒನ್ ಬ್ರೋಕರೇಜ್ ಸಂಸ್ಥೆಗಳು ರಾತ್ರೋರಾತ್ರಿ ಬಂದ್‌ ಆಗಿರುವುದು ಬೆಳಕಿಗೆ ಬಂದಿದೆ.

ಕಳೆದ ತಿಂಗಳವರೆಗೆ, ಗಲ್ಫ್ ಫಸ್ಟ್ ಕಮರ್ಷಿಯಲ್ ಬ್ರೋಕರ್ಸ್, ದುಬೈನ ಬ್ಯುಸಿನೆಸ್ ಬೇಯಲ್ಲಿರುವ ಕ್ಯಾಪಿಟಲ್ ಗೋಲ್ಡನ್ ಟವರ್‌ನಲ್ಲಿ ಎರಡು ಕಚೇರಿಗಳು ಹಾಗೂ 40 ಉದ್ಯೋಗಿಗಳನ್ನು ಹೊಂದಿದ್ದ ಈ ಬ್ರೋಕರೇಜ್ ಸಂಸ್ಥೆಗಳು ಸದ್ದಿಲ್ಲದೇ ಬಾಗಿಲು ಹಾಕಿವೆ. ಸದ್ಯ ಈ ಸಂಸ್ಥೆಯ ಎರಡು ಕಚೇರಿಗಳು ಮುಚ್ಚಿದ್ದು, ಫೋನ್ ವೈರ್‌ಗಳು ಸೇರಿದಂತೆ ಎಲ್ಲಾ ಸಂಪರ್ಕಗಳನ್ನು ಕಿತ್ತು ಹಾಕಿರುವುದಲ್ಲದೇ, ಕಚೇರಿ ಇದ್ದ ಸ್ಥಳದಲ್ಲಿ ಸಂಪೂರ್ಣವಾಗಿ ಧೂಳು ಆವರಿಸಿಕೊಂಡಿದೆ.

ಈ ಸಂಸ್ಥೆಗಳ ಆಡಳಿತ ಮಂಡಳಿ ಕಚೇರಿಗಳ ಬೀಗದ ಕೈಗಳನ್ನು ಹಿಂತಿರುಗಿಸಿದ್ದು, ಒಳಗಿದ್ದ ಎಲ್ಲಾ ವಸ್ತುಗಳನ್ನುತೆರವುಗೊಳಿಸಿ ಆತುರದಲ್ಲಿದ್ದಂತೆ ಹೊರಟು ಹೋದರು. ಈಗ ಪ್ರತಿ ದಿನ ಜನರು ಬಂದು ಅವರ ಬಗ್ಗೆಯೇ ಕೇಳುತ್ತಿದ್ದಾರೆ ಎಂದು ಕ್ಯಾಪಿಟಲ್ ಗೋಲ್ಡನ್ ಟವರ್‌ನ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ಈ ಬ್ರೋಕರೇಜ್ ಸಂಸ್ಥೆ ಯಲ್ಲಿ ಹೆಚ್ಚಿನ ಹೂಡಿಕೆದಾರರು ಫೋನ್ ಸಂಭಾಷಣೆಗಳ ಮೂಲಕವೇ ಹಣವನ್ನು ಹೂಡಿಕೆ ಮಾಡಿದ್ದಾರೆ. ಈ ಸಂಸ್ಥೆ ನೀಡಿದ ಭರವಸೆ ಮೇಲೆ ಲಕ್ಷಾಂತರ ರೂಪಾಯಿಯನ್ನು ಹೂಡಿಕೆ ಮಾಡಿರುವವರಿಗೆ ಈಗ ತಾವು ಮೋಸ ಹೋಗಿರುವುದು ತಿಳಿದು ಬಂದಿದೆ. ವಂಚನೆ ಹಿನ್ನೆಲೆಯಲ್ಲಿ ಪೊಲೀಸರು ಗಲ್ಫ್ ಫಸ್ಟ್ ಮತ್ತು ಸಿಗ್ಮಾ-ಒನ್ ಎರಡೂ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಈ ವಂಚಕರಿಂದ ಮೋಸ ಹೋದವರಲ್ಲಿ ಭಾರತದ ಕೇರಳದ ಮೂಲದವರು ಕೂಡ ಇದ್ದು, ಲಕ್ಷಾಂತರ ರೂಪಾಯಿ ಕಳೆದುಕೊಂಡು ಕಂಗಾಲಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries