ಕುಂಬಳೆ: ಎಡನಾಡು ಕಣ್ಣೂರು ಸರ್ವೀಸ್ ಕೋಓಪರೇಟಿವ್ ಬ್ಯಾಂಕ್‍ನ ವಿಶೇಷ ಗೋಲ್ಡ್ ಲೋನ್ ಯೋಜನೆಗೆ ಸೋಮವಾರ ಚಾಲನೆಯನ್ನು ನೀಡಲಾಯಿತು.
ಸಹಾಯಕ ರಿಜಿಸ್ಟ್ರಾರ್ ರವೀಂದ್ರ ಉದ್ಘಾಟಿಸಿದರು. ಬ್ಯಾಂಕ್‍ನ ಅಧ್ಯಕ್ಷ ಶ್ಯಾಮರಾಜ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಅಧ್ಯಕ್ಷ ಶಿವರಾಮ ಭಟ್ ಕಾರಿಂಜ ಹಳೆಮನೆ ಭಾಗವಹಿಸಿದ್ದರು. ಸರ್ಕಲ್ ಕೋ ಓಪರೇಟಿವ್ ಯೂನಿಯನ್ ನ ನಿದೇ9ಶಕರಾಗಿ ಆಯ್ಕೆಯಾದ ಬ್ಯಾಂಕ್ ನಿದೇ9ಶಕ ಶ್ರೀಕೃಷ್ಣ ಪ್ರಸಾದ ಅವರನ್ನು ಗೌರವಿಸಲಾಯಿತು. ಮಾಜಿ ಅಧ್ಯಕ್ಷ ಜಯಂತ ಪಾಟಾಳಿ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಹರಿಣಿ ಜಿ.ಕೆ.ನಾಯಕ್ ಸ್ವಾಗತಿಸಿ, ನಿರ್ದೇಶಕ ನಟೇಶ ಕುಮಾರ ವಂದಿಸಿದರು.

.jpg)
