ಪೋಪ್ ಲಿಯೋ 14 ಅವರು ಪೋಪ್ ಆಗಿ ಆಯ್ಕೆಯಾದ ಬಳಿಕ ಮೊದಲ ರವಿವಾರದ ಸಂದೇಶದಲ್ಲಿ ಇನ್ನು ಯುದ್ಧ ಬೇಡ ಎಂದು ಮನವಿ ಮಾಡಿದ್ದಾರೆ.
ಉಕ್ರೇನ್‌ನಲ್ಲಿ ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ಸ್ಥಾಪಿಸುವಂತೆ ಮತ್ತು ಗಾಝಾದಲ್ಲಿ ಒತ್ತೆಯಾಳುಗಳ ಬಿಡುಗಡೆ ಮತ್ತು ಮಾನವೀಯ ನೆರವಿನೊಂದಿಗೆ ತಕ್ಷಣ ಕದನ ವಿರಾಮ ಘೋಷಿಸುವಂತೆ ಕರೆ ನೀಡಿದರು.
ವ್ಯಾಟಿಕನ್ ನ್ಯೂಸ್ ಪ್ರಕಾರ, ಪೋಪ್ ಲಿಯೋ 14 ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಕದನ ವಿರಾಮ ಘೋಷಣೆಯನ್ನು ಸ್ವಾಗತಿಸಿದರು. ಮುಂದಿನ ದಿನಗಳಲ್ಲಿ ಮಾತುಕತೆಗಳ ಮೂಲಕ ಮತ್ತು ಶಾಶ್ವತ ಒಪ್ಪಂದಗಳ ಮೂಲಕ ಪರಿಹಾರವನ್ನು ಕಂಡು ಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ. ಮತ್ತೆ ಎಂದಿಗೂ ಯುದ್ಧ ಮಾಡಬೇಡಿ ಎಂದು ಪೋಪ್ ಲಿಯೋ ಅವರು ಸೇಂಟ್ ಪೀಟರ್ಸ್ ಬೆಸಿಲಿಕಾದ ಲಾಗ್ಗಿಯಾದಲ್ಲಿ ಹೇಳಿದರು.
ಎರಡನೇ ಮಹಾಯುದ್ಧದ ಅಂತ್ಯವನ್ನು ನೆನಪಿಸಿಕೊಂಡ ನೂತನ ಪೋಪ್ ಲಿಯೋ, ಪೋಪ್ ಫ್ರಾನ್ಸಿಸ್ ಅವರ ಮಾತುಗಳನ್ನು ಉಲ್ಲೇಖಿಸಿ ನಡೆಯುತ್ತಿರುವ ಸಂಘರ್ಷಗಳನ್ನು ವಿರೋಧಿಸುತ್ತಾ, ಮೂರನೇ ಮಹಾಯುದ್ಧ ಜಗತ್ತನ್ನು ಹೋಳಾಗಿಸುತ್ತದೆ ಎಂದು ಹೇಳಿದರು.




