ಉಪ್ಪಳ: ಸಿ.ಬಿ.ಎಸ್.ಸಿ. 10 ನೇ ತರಗತಿಯ ಪರೀಕ್ಷೆಯ 2024-25 ಸಾಲಿನಲ್ಲಿ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳೆಲ್ಲ ಉತ್ತಮ ಅಂಕಗಳೊಡನೆ ಶೇ.ನೂರು ಫಲಿತಾಂಶ ಸಾಧಿಸಿದ್ದಾರೆ. ಇವರನ್ನು ಅಭಿನಂದಿಸಿ ಆಶೀರ್ವದದಿಸಿದ ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಅವರ ಮುಂದಿನ ವಿದ್ಯಾಭ್ಯಾಸಕ್ಕೂ ಶುಭ ಹಾರೈಸಿದ್ದಾರೆ. ಶಾಲಾ ಆಡಳಿತ ಮಂಡಳಿ, ಅಧ್ಯಾಪಕ ಬಳಗ, ಸಿಬ್ಬಂದಿ ವರ್ಗ, ಹಾಗೂ ರಕ್ಷಕ ಶಿಕ್ಷಕ ಸಂಘದವರು ಅಭಿನಂದಿಸಿದ್ದಾರೆ.




