ಕಾಸರಗೋಡು: ಬಿರುಸಿನ ಮಳೆಯಿಂದ ನೀಲೇಶ್ವರ ಕಲ್ಯಾಣ್ ರಸ್ತೆ ಬಳಿಯ ಕಾಞಂಗಾಡ್ ಕ್ರೈಸ್ಟ್ ಶಾಲೆಯ ಎದುರಿನ ಹಾನಿಗೊಳಗಾದ ಸನಿಹದ ರಸ್ತೆಗೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಸದುರ್ಗ ತಹಸೀಲ್ದಾರ್ ಜಯಪ್ರಸಾದ್, ಉಪ ತಹಸೀಲ್ದಾರ್ ತುಳಸಿರಾಜ್ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಿಲ್ಲಾಧಿಕಾರಿ ಜತೆಗಿದ್ದರು. ಬಿರುಸಿನ ಮಳೆಯಿಂದ ಹಾನಿಗೊಳಗಾದ ರಾಷ್ಟ್ರೀಯ ಹೆದ್ದಾರಿಯ ವಿವಿಧ ಸ್ಥಳಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಹಾಣಿಯ ಬಗ್ಗೆ ಪರಾಮರ್ಶೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ನಡೆಯುತ್ತಿರುವ ಕಲ್ಯಾಣ್ ರಸ್ತೆ ಕ್ರೈಸ್ಟ್ ಶಾಲೆಯ ಪೂರ್ವ ಭಾಗದಲ್ಲಿ, ಕಾಸರಗೋಡಿನಿಂದ ಕಣ್ಣೂರಿU ತೆರಳುವ ರಸ್ತೆ ಅಂಚಿನ 53 ಮೀಟರ್ ಉದ್ದ ಮತ್ತು 4.10 ಮೀಟರ್ ಅಗಲದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಜಿಲ್ಲಾಧಿಕಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ರಸ್ತೆಯ ದಕ್ಷಿಣಕ್ಕಿರುವ ಸರ್ವಿಸ್ ರಸ್ತೆ ಕುಸಿದು ವಾಹನ ಸಂಚಾರಕ್ಕೆ ತೊಡಕಾಗಿರುವ ಪ್ರದೇಶಕ್ಕೂ ಜಿಲ್ಲಾಧಿಕಾರಿ ಭೇಟಿ ನೀಡಿದರು.





