ಕಾಸರಗೋಡು: ರಾಜ್ಯ ಪಶುಸಂಗೋಪನೆ ಮತ್ತು ಡೇರಿ ಖಾತೆ ಸಚಿವೆ ಕೆ. ಚಿಂಚುರಾಣಿ ಮೇ 19ರಂದು ಕಾಸರಗೊಡು ಜಿಲ್ಲೆಯಲ್ಲಿ ವಇವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10ಕ್ಕೆ ಇಡಯಿಂಕೋಡಿನಲ್ಲಿ ನಡೆಯಲಿರುವ ಹೈನುಗಾರರ ಸಮವೇಶದಲ್ಲಿ ಭಾಗವಹಿಸಲಿದ್ದು, ನೂತನ ಕಟ್ಟಡದ ಉದ್ಘಾಟನೆ ನೆರವೇರಿಸುವರು. ಮಧ್ಯಾಹ್ನ 12ಕ್ಕೆ ನೀಲೇಶ್ವರದ ಎಲ್‍ಎಂಟಿಸಿ ಕಟ್ಟಡ ಉದ್ಘಾಟಿಸುವರು, 2ಗಂಟೆಗೆ ಬೇಡಡ್ಕದ ಆಡು ಸಾಕಣಿಕೆ ಕೇಂದ್ರಕ್ಕೆ ಭೇಟಿ ನೀಡುವರು.
ಮುಳಿಯಾರಿನಲ್ಲಿ ಎಬಿಸಿ ಕೇಂದ್ರ ಉದ್ಘಾಟನೆ:
ಅಂದು ಮಧ್ಯಾಹ್ನ 3ಕ್ಕೆ ಬೀದಿ ನಾಯಿಗಳ ಸಂತತಿ ವೃದ್ಧಿ ಮತ್ತು ದಾಳಿ ತಡೆಗಟ್ಟುವ ಉದ್ದೆಸದೊಂದಿಗೆ ಪ್ರಾಣಿ ಕಲ್ಯಾಣ ಇಲಾಖೆ ಮತ್ತು ತ್ರಿಸ್ತರ ಪಂಚಾಯಿತಿಗಳು ಜಂಟಿಯಾಗಿ ಜಾರಿಗೆ ತಂದಿರುವ ಎನಿಮಲ್ ಬರ್ತ್ ಕಂಟ್ರೋಲ್(ಎಬಿಸಿ)ಕೇಂದ್ರವನ್ನು ಮುಳಿಯಾರ್‍ನಲ್ಲಿ ಸಚಿವೆ ಉದ್ಘಾಟಿಸುವರು. ಪ್ರಾಣಿ ಕಲ್ಯಾಣ ಕಾನೂನು ಪಾಲಿಸಿಕೊಮಡು ಬೀದಿ ನಾಯಿಗಳನ್ನು ನಿಯಂತ್ರಿಸುವ ನಿಟ್ಟನಲ್ಲಿ ಎಬಿಸಿ ಕೇಂದ್ರ ಕಾರ್ಯಾಚರಿಸಲಿದ್ದು, ಬೀದಿನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಕ್ರಿಯೆ ಕೇಂದ್ರದಲ್ಲಿ ನಡೆಯಲಿದೆ. ಈ ಮೂಲಕ ಸಂತಾನೋತ್ಪತ್ತಿ ಸಾಧ್ಯತೆಯನ್ನು ನಿವಾರಿಸುವುದು ಕೇಂದ್ರದ ಗುರಿಯಾಗಿದೆ. ಮುಳಿಯಾರ್‍ನಲ್ಲಿ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಎಬಿಸಿ ಕೇಂದ್ರ ಇದಾಗಿದ್ದು, ಪ್ರತಿದಿನ ಇಪ್ಪತ್ತು ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಕ್ರಿಯೆ ನಡೆಸಲು ಸಾಧ್ಯವಾಗಲಿದೆ. ಮಾನ್ಯತೆ ಪಡೆದ ಸಂಸ್ಥೆಯಾದ ನೈನ್ ಫೌಂಡೇಶನ್ ಕೇಂದ್ರವನ್ನು ನಿರ್ವಹಿಸಲಿದೆ.





