ಕಾಸರಗೋಡು: ನೀತಿ ಆಯೋಗದ ಮಹತ್ವಾಕಾಂಕ್ಷೆಯ ಬ್ಲಾಕ್ ಯೋಜನೆಯಲ್ಲಿ ಅತ್ಯುತ್ತಮ ಸಾಧನೆಗಾಗಿ 2024 ರ ಪ್ರಧಾನ ಮಂತ್ರಿಗಳ ಉತ್ತಮ ಸಾರ್ವಜನಿಕ ಆಡಳಿತದ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿರುವ ಪರಪ್ಪ ಬ್ಲಾಕ್ ಪಂಚಾಯಿತಿಯಲ್ಲಿ ಮೇ 18ರಂದು ಸಾರ್ವಜನಿಕ ಸಂಭ್ರಮಾಚರಣೆ ನಡೆಯಲಿರುವುದು.
ಬ್ಲಾಕ್ ಪಂಚಾಯಿತಿಗಳಲ್ಲಿ ಈ ಮನ್ನಣೆ ಪಡೆದ ಕೇರಳದ ಏಕೈಕ ಬ್ಲಾಕ್ ಆಗಿದೆ. ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಅವರು ಅಭಿನಂದನಾ ಭಾಷಣದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ ಅಧ್ಯಕ್ಷತೆ ವಹಿಸುವರು. ಶಾಸಕರಾದ ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ರಾಜಕೀಯ ಪ್ರತಿನಿಧಿಗಳು ಮೊಸಲದವರು ಭಾಗವಹಿಸಲಿದ್ದಾರೆ. ಸಮಾರಂಭದ ಅಂಗವಾಗಿ ವಿವಿಧ ಕಲಾಪ್ರದರ್ಶನ ಒಳಗೊಂಡ ಮೆರವಣಿಗೆ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.




