HEALTH TIPS

ಕೇರಳದ ಮಹಿಳಾ ವಿಮೋಚನ ಚಳವಳಿಗೆ ಕುಟುಂಬಶ್ರಿ ಕೊಡುಗೆ ಅಪಾರ-ಸಚಿವ ಎ.ಕೆ ಶಶೀಂದ್ರನ್

ಕಾಸರಗೋಡು: ಕೇರಳದಲ್ಲಿ ಸಾಂಸ್ಕøತಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳಾ ವಿಮೋಚನಾ ಚಳವಳಿಗೆ ಕುಟುಂಬಶ್ರೀ ವೇದಿಕೆಯಾಗಿದೆ ಎಂದು  ಅರಣ್ಯ ಮತ್ತು ವನ್ಯಜೀವಿ ಖಾತೆ ಸಚಿವ ಎ.ಕೆ. ಶಶೀಂದ್ರನ್ ತಿಳಿಸಿದ್ದಾರೆ. 

ಅವರು ಕಾಸರಗೋಡು ಕಯ್ಯೂರಿನಲ್ಲಿ ನಡೆದ ಕುಟುಂಬಶ್ರೀ-ನೆರೆಕರೆ ಕೂಟ ಸಹಾಯಕ ಸದಸ್ಯರ ಸರ್ಗೋತ್ಸವ ಸಂಭ್ರಮ-2025'ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 1998 ರಲ್ಲಿ ಆರಂಭವಾದಾಗಿನಿಂದ, ಕುಟುಂಬಶ್ರೀ ಏಷ್ಯಾದಲ್ಲಿ ಅತ್ಯಂತ ಬಲಿಷ್ಠ ಮಹಿಳಾ ಸಂಘಟಿತ ಚಳುವಳಿಯಾಗಲು ಸಾಧ್ಯವಾಗಿದೆ. ಕುಟುಂಬಶ್ರಿ ಮೂಲಕ ಕೇರಳದಾದ್ಯಂತ ಸುಮಾರು ಮೂರು ಲಕ್ಷದ ಹತ್ತು ಸಾವಿರ ಉದ್ಯಮಗಳನ್ನು ಆರಂಭಿಸಲು ಸಾಧ್ಯವಾಗಿದೆ. ಪ್ರಸಕ್ತ ಸಮಾಜದಲ್ಲಿರುವ ಅನೈತಿಕ ಪದ್ಧತಿ, ವ್ಯಸನಗಳು ಮತ್ತು ಮಾದಕ ವಸ್ತುಗಳ ದುರುಪಯೋಗದ ವಿರುದ್ಧ ಹೋರಾಟ ಸೇರಿದಮತೆ ವಿವಿಧ ಕ್ಷೇತ್ರಗಳಲ್ಲಿ ಮಧ್ಯಪ್ರವೇಶಿಸುವ ಮೂಲಕ ಕೇರಳವನ್ನು ಮಾದರಿ ರಾಜ್ಯವನ್ನಾಗಿ ಮಾಡುವಲ್ಲಿ ಕುಟುಂಬಶ್ರೀ ವಹಿಸುತ್ತಿರುವ ಪಾತ್ರ ಮಹತ್ತರವಾಗಿದೆ ಎಂದು ಅವರು ಹೇಳಿದರು.

ಶಾಸಕ ಎಂ. ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ-ಪ್ರಭಾರಿ ಸಿ.ಎಚ್.ಇಕ್ಬಾಲ್ ವರದಿ ಮಂಡಿಸಿದರು. ಜಿಪಂ ಅದ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಞಂಗಾಡ್ ನಗರಸಭಾ ಅಧ್ಯಕ್ಷೆ ಕೆ.ವಿ. ಸುಜಾತಾ, ಗ್ರಾಮ ಪಂಚಾಯಿತಿ ಅಸೋಸಿಯೇಶನ್ ಕಾರ್ಯದರ್ಶಿ, ವಕೀಲೆ ಎ.ಪಿ.ಉಷಾ, ಕಯ್ಯೂರು-ಚೀಮೇನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಜಿ.ಅಜಿತ್ ಕುಮಾರ್, ಜಿಲ್ಲಾ ಪಂಚಾಯಿತಿ ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ, ನೀಲೇಶ್ವರ ಬ್ಲಾಕ್ ಪಂಚಾಯತ್ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಸುಮೇಶ್, ನೀಲೇಶ್ವರಂ ಬ್ಲಾಕ್ ಪಂಚಾಯತ್ ಸದಸ್ಯರಾದ ಪಿ.ಬಿ. ಶೀಬಾ, ಎಂ.ಕುಞÂರಾಮನ್ ಮೊದಲಾದವರು ಭಾಗವಹಿಸಿದ್ದರು. 

ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಸಂಘಟನಾ ಸಮಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಸ್ವಾಗತಿಸಿ, ಕಯ್ಯೂರು ಚೀಮೇನಿ ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಆರ್.ರಜಿತಾ ವಂದಿಸಿದರು. ಮೂರು ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿನ 49 ವಿಭಾಗಗಳಲ್ಲಿ ನಡೆದ ತಾಲ್ಲೂಕು ಮಟ್ಟದ ಕಲಾ ಉತ್ಸವದದಲ್ಲಿ ವಿಜೇತರಾದ 1,500 ಪ್ರತಿಭಾನ್ವಿತರು ಭಾಗವಹಿಸಲಿದ್ದಾರೆ. ಕಯ್ಯೂರಿನ ಶಾಲಾ ವಠರದಲ್ಲಿ ನಿರ್ಮಿಸಲಾಗಿರುವ ತೇಜಸ್ವಿನಿ ಮತ್ತು ಚಂದ್ರಗಿರಿ ವೇದಿಕೆಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಗುತ್ತಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries