ಕುಂಬಳೆ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಮಂಜೇಶ್ವರ ಹಾಗೂ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಯುವತಿ ಹಾಗೂ ಗೃಹಿಣಿ ನಾಪತ್ತೆಯಾಗಿದ್ದಾರೆ. ಕುಂಬಳೆ ಸನಿಹದ ಬಂಬ್ರಾಣ ನಿವಾಸಿ ರಂಜಿತಾ(22)ನಾಪತ್ತೆಯಗಿರುವ ಬಗ್ಗೆ ಈಕೆ ಸಹೋದರಿ ನೀಡಿರುವ ದೂರಿನನ್ವಯ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಸಂಜೆ ಮನೆಯಿಂದ ಹೊರಹೋಗಿದ್ದ ರಂಜಿತಾ ವಾಪಸಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಉಪ್ಪಳ ಮಣ್ಣಂಗುಳಿ ನಿವಾಸಿ ಬಾತಿಷ ಎಂಬವರ ಪತ್ನಿ ರಂಶೀನ(27)ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮನೆಯಿಂದ ಪೇಟೆಗೆ ತೆರಳಿದ್ದ ರಂಶೀನಾ, ವಾಪಸಾಗಿರಲಿಲ್ಲ, ಅಲ್ಲದೆ ಆಕೆಯ ಮೊಬೈಲ್‍ಗೆ ಕರೆಮಾಡಿದಾಗ ಸ್ವಿಚ್‍ಆಫ್ ಆಗಿರುವುದಾಗಿ ಈಕೆ ಪತಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.




