ಪೆರ್ಲ: ಪೆರ್ಲ ನಿವಾಸಿ, ದಿ. ಮಾಲಿಂಗ ಪಾಟಾಳಿ ಎಂಬವರ ಪುತ್ರ, ಪೆರ್ಲ ಪೇಟೆಯ ಕೆ.ಕೆ ರಸ್ತೆಯಲ್ಲಿ ವ್ಯಾಪಾರಿಯಾಗಿರುವ ವಿವೇಕಾನಂದ(41)ನಾಪತ್ತೆಯಾಗಿರುವ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮೇ 13ರಂದು ಎಂದಿನಂತೆ ಮನೆಯಿಂದ ಅಂಗಡಿಗೆ ತೆರಳಿದ್ದ ವಿವೇಕಾನಂದ ಅವರು, ಮನೆಗೆ ವಾಪಸಾಗಿಲ್ಲ ಎಂದು ಇವರ ಪತ್ನಿ ಸುನಿತಾ ಬದಿಯಡ್ಕ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮೇ 14ರಂದು ಬೇರೊಂದು ನಂಬರಿನಿಂದ ಪತ್ನಿಗೆ ಕರೆಮಾಡಿದ್ದ ವಿವೇಕಾನಂದ ಅವರು ತಾನು ಗೋವಾ ತೆರಳುತ್ತಿರುವುದಾಗಿ ತಿಳಿಸಿದ್ದರು. ಆದರೆ, ಗೋವಾದಲ್ಲಿರುವ ಇವರ ಸಂಬಂಧಿಕರಲ್ಲಿಗೆ ತೆರಳದಿರುವ ಹಿನ್ನೆಲೆಯಲ್ಲಿ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಇವರು ಅಪರಿಚಿತ ಮೊಬೈಲ್ ಸಂಖ್ಯೆ ಬಳಸಿ ಕರೆ ಮಾಡಿರುವುದರಿಂದ ಇದು ನಿಗೂಢತೆಗೆ ಕಾರಣವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




