ಪಾಲಕ್ಕಾಡ್: ಹೆಡ್ಗೆವಾರ್ ಮತ್ತು ಗುರೂಜಿ ಗೋಲ್ವಾಲ್ಕರ್ ಅವರಂತಹ ವ್ಯಕ್ತಿಗಳ ಬಗ್ಗೆ ಸಮಾಜದಲ್ಲಿ ತಪ್ಪು ವ್ಯಾಖ್ಯಾನಗಳನ್ನು ಹರಡಲಾಗುತ್ತಿದೆ ಎಂದು ಕೇರಳ ರಾಜ್ಯಪಾಲ ಡಾ. ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ತಿಳಿಸಿದ್ದಾರೆ.
ಆನಿಕೋಡು ಸಾಂದೀಪನಿ ಸಾಧನಾಲಯ ಚಾರಿಟೇಬಲ್ ಮತ್ತು ವೆಲ್ಫೇರ್ ಟ್ರಸ್ಟ್ ಘೋಷಿಸಿರುವ ಸುಕೃತ ಸ್ಮೃತಿ ಪ್ರಶಸ್ತಿಗಳ ವಿತರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾಶ್ಮೀರದಲ್ಲಿ ನಡೆದದ್ದು ಧಾರ್ಮಿಕ ಪ್ರೇರಿತ ದಾಳಿ. ಇದರ ಹಿಂದೆ ಪಾಕಿಸ್ತಾನ ಮಾತ್ರವಲ್ಲದೆ ಹಲವು ಪಾಶ್ಚಿಮಾತ್ಯ ಶಕ್ತಿಗಳ ಆರ್ಥಿಕ ಬೆಂಬಲವೂ ಇದೆ. ಭಾರತದ ಸಮಗ್ರತೆಗೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ನಾವು ಸಹಿಸುವುದಿಲ್ಲ. ಭಾರತ ಯಾವುದೇ ರೀತಿಯ ದಾಳಿಯನ್ನು ಎದುರಿಸುವ ಸಾಮಥ್ರ್ಯವಿರುವ ಶಕ್ತಿಯಾಗಿ ಬೆಳೆದಿದೆ. ಕಾಲಡಿಯಲ್ಲಿ ಶಂಕರಾಚಾರ್ಯರಿಗೆ ಸೂಕ್ತವಾದ ಸ್ಮಾರಕದ ಅಗತ್ಯತೆಯ ಬಗ್ಗೆ ಪ್ರಧಾನಿಯವರಿಗೆ ತಿಳಿಸಿದ್ದೇನೆ ಮತ್ತು ಈ ನಿಟ್ಟಿನಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವು 100 ನೇ ವರ್ಷಾಚರಣೆಯಲ್ಲೂ ಸಹ ಅದ್ದೂರಿ ಆಚರಣೆಯನ್ನು ಆಯೋಜಿಸುತ್ತಿಲ್ಲ. ಬದಲಾಗಿ, ಈ ವಿಚಾರವನ್ನು ಎಲ್ಲರಿಗೂ ತಲುಪಿಸಲಾಗುತ್ತಿದೆ. ಪ್ರತಿ ಮನೆಗೆ ಶಂಕರಾಚಾರ್ಯರ ಪ್ರತಿಮೆಯನ್ನು ತಲುಪಿಸುವ ಸಾಂದೀಪಿನಿಯ ಹೊಸ ಯೋಜನೆಗೆ ರಾಜ್ಯಪಾಲರು ಚಾಲನೆ ನೀಡಿದರು. ಶ್ರೀ ಕಾಂಚಿ ಶಂಕರಾಚಾರ್ಯ ಸೇವಾ ಟ್ರಸ್ಟ್‍ನ ವ್ಯವಸ್ಥಾಪಕ ಟ್ರಸ್ಟಿ ಪ್ರಕಾಶ್ ಮುತ್ತುಸ್ವಾಮಿ ಅವರಿಗೆ ಶಂಕರಾಚಾರ್ಯರ ವಿಗ್ರಹವನ್ನು ಹಸ್ತಾಂತರಿಸುವ ಮೂಲಕ ಉದ್ಘಾಟನೆ ನಿರ್ವಹಿಸಿದರು.
ಸ್ವಾಮಿ ಅಶೇಷಾನಂದರು ಅಧ್ಯಕ್ಷತೆ ವಹಿಸಿದ್ದರು. ಆರ್‍ಎಸ್‍ಎಸ್‍ನ ಹಿರಿಯ ಪ್ರಚಾರಕ ಎಸ್.ಸೇತುಮಾಧವನ್, ನಿವೃತ್ತ ರಾಜ್ಯ ಪೆÇಲೀಸ್ ದೂರು ಪ್ರಾಧಿಕಾರದ ಮುಖ್ಯ ತನಿಖಾಧಿಕಾರಿ ಅಜಿತ್ ಕುಮಾರ್ ವರ್ಮಾ, ಸಾಂದೀಪಿನಿ ಸಾಧನಾಲಯ ಟ್ರಸ್ಟಿ ಡಾ.ಸಿ.ಶ್ಯಾಮ್ ಪ್ರಸಾದ್ ಮತ್ತು ಶ್ರುತಿಶ್ಯಾಮ್ ಮಾತನಾಡಿದರು.






