HEALTH TIPS

ಭಾರತ-ಬ್ರಿಟನ್ ಮಧ್ಯೆ ಐತಿಹಾಸಿಕ ಫ್ರೀ ಟ್ರೇಡ್ ಒಪ್ಪಂದ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಯುದ್ಧದ ಸುದ್ದಿಗಳ ಮಧ್ಯೆ ಸದ್ದಿಲ್ಲದೆ ಭಾರತವು ಬ್ರಿಟನ್ ಜೊತೆ ಎಫ್​​ಟಿಎ (India-UK Free Trade Agreement) ಒಪ್ಪಂದ ಮಾಡಿಕೊಂಡಿದೆ. ಭಾರತ ಮತ್ತು ಯುನೈಟೆಡ್ ಕಿಂಗ್ಡಂ ರಾಷ್ಟ್ರಗಳು ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿವೆ ಎಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ಎಕ್ಸ್ ಪೋಸ್ಟ್​​​ನಲ್ಲಿ ಘೋಷಿಸಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ಸರ್ ಕೀರ್ ಸ್ಟಾರ್ಮರ್ ಅವರು ಇಂದು ದೂರವಾಣಿ ಮೂಲಕ ಮಾತನಾಡಿ, ಈ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ.

ಭಾರತ ಮತ್ತು ಬ್ರಿಟನ್ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ ಹಾಗೂ ಡಬಲ್ ಕಾಂಟ್ರಿಬ್ಯೂಷನ್ ಕನ್ವೆನ್ಷನ್ (Double contribution convention) ಕೂಡ ಅಂತಿಮಗೊಂಡಿದೆ. ಇಲ್ಲಿ ಡಬಲ್ ಕಾಂಟ್ರಿಬ್ಯೂಶನ್ ಕನ್ವೆನ್ಷನ್ ಎಂದರೆ, ಒಂದು ದೇಶದ ನಾಗರಿಕರು ಮತ್ತೊಂದು ದೇಶದಲ್ಲಿ ಕೆಲಸ ಮಾಡುತ್ತಿರುವಾಗ ಎರಡೂ ದೇಶಗಳ ಸೋಷಿಯಲ್ ಸೆಕ್ಯುರಿಟಿ ಸ್ಕೀಮ್​​ಗಳಿಗೆ ಕೊಡುಗೆ ನೀಡುವ ಬದಲು ಯಾವುದಾದರೂ ಒಂದು ದೇಶದ ಸ್ಕೀಮ್ ಅನ್ನು ಆಯ್ದುಕೊಳ್ಳಲು ಅವಕಾಶ ನೀಡುತ್ತದೆ.

ಎಫ್​​ಟಿಎ: ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದ ನಾಯಕರು

ಭಾರತ ಮತ್ತು ಬ್ರಿಟನ್ ನಡುವಿನ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕ ಮೈಲಿಗಲ್ಲು ಎಂದು ನರೇಂದ್ರ ಮೋದಿ ಮತ್ತು ಸರ್ ಕೀರ್ ಸ್ಟಾರ್ಮರ್ ಇಬ್ಬರೂ ಬಣ್ಣಿಸಿದ್ದಾರೆ. ಎರಡೂ ಆರ್ಥಿಕತೆಗಳಲ್ಲಿ ವ್ಯಾಪಾರ, ಹೂಡಿಕೆ, ನಾವೀನ್ಯತೆ ಮತ್ತು ಉದ್ಯೋಗಸೃಷ್ಟಿಗೆ ಪುಷ್ಟಿ ಸಿಗುತ್ತದೆ. ಎರಡೂ ದೇಶಗಳ ಮಧ್ಯೆ ಆರ್ಥಿಕ ಕೊಂಡಿಗಳು, ಜನರ ಜನರ ನಡುವಿನ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಉದ್ಯಮಗಳಿಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದು ಕೇಂದ್ರ ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ವರ್ಣಿಸಲಾಗಿದೆ.

'ನನ್ನ ಸ್ನೇಹಿತರಾದ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಮಾತನಾಡಿದ್ದು ಖುಷಿಯಾಯಿತು. ಎರಡೂ ದೇಶಗಳಿಗೆ ಪರಸ್ಪರ ಅನುಕೂಲವಾಗುವ, ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಡಬಲ್ ಕಾಂಟ್ರಿಬ್ಯೂಶನ್ ಕನ್ವೆಷನ್ ಒಪ್ಪಂದವನ್ನೂ ಅಂತಿಮಗೊಳಿಸಲಾಗಿದೆ. ಈ ಮಹತ್ವದ ಒಪ್ಪಂದಗಳು ನಮ್ಮ ಸಮಗ್ರ ಸಹಭಾಗಿತ್ವವನ್ನು ಹೆಚ್ಚಿಸಲಿವೆ. ನಮ್ಮ ಎರಡೂ ಆರ್ಥಿಕತೆಗಳಲ್ಲಿ ವ್ಯಾಪಾರ, ಹೂಡಿಕೆ, ಪ್​ರಗತಿ, ಉದ್ಯೋಗಸೃಷ್ಟಿ, ಇನ್ನೋವೇನ್ ಅನ್ನು ಹೆಚ್ಚಿಸಲು ಇದು ಸಹಾಯವಾಗಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್​​​ನಲ್ಲಿ ಬರೆದಿದ್ದಾರೆ.

ಇದೇ ವೇಳೆ, ಬ್ರಿಟನ್ ಪ್ರಧಾನಿಯನ್ನು ನರೇಂದ್ರ ಮೋದಿ ಅವರು ಭಾರತಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಶೀಘ್ರದಲ್ಲೇ ಸರ್ ಕೀರ್ ಸ್ಟಾರ್ಮರ್ ಅವರು ಭಾರತಕ್ಕೆ ಭೇಟಿ ನೀಡಬಹುದು ಎನ್ನಲಾಗುತ್ತಿದೆ.

ಬ್ರಿಟನ್ ಪ್ರಧಾನಿಗಳೂ ಕೂಡ ಭಾರತದೊಂದಿಗಿನ ಎಫ್​​ಟಿಎ ಬಗ್ಗೆ ಸಂತಸ ಹೊಂದಿದ್ದಾರೆ. ವಿಶ್ವಾದ್ಯಂತ ವಿವಿಧ ಆರ್ಥಿಕತೆಗಳೊಂದಿಗೆ ಇರುವ ವ್ಯಾಪಾರ ತಡೆಗಳನ್ನು ಕಡಿಮೆ ಮಾಡುವುದು, ಮತ್ತು ಮೈತ್ರಿಗಳನ್ನು ಗಟ್ಟಿಗೊಳಿಸುವುದು ತಮ್ಮ ಉದ್ದೇಶವಾಗಿದೆ ಎಂದಿದ್ದಾರೆ.

ಏನಿರಬಹುದು ಭಾರತ ಮತ್ತು ಯುಕೆ ಮುಕ್ತ ವ್ಯಾಪಾರ ಒಪ್ಪಂದದಲ್ಲಿ?

ಕೆಲ ಸರಕುಗಳಿಗೆ ಭಾರತ ಮತ್ತು ಬ್ರಿಟನ್ ದೇಶಗಳು ಸಾಕಷ್ಟು ಆಮದು ಸುಂಕ ವಿಧಿಸುತ್ತವೆ. ಬ್ರಿಟನ್​​ನಿಂದ ಬರುವ ಸ್ಕಾಚ್ ವಿಸ್ಕಿ, ಜಿನ್​​ಗಳಿಗೆ ಭಾರತ ಶೇ. 150 ಸುಂಕ ಹಾಕುತ್ತದೆ. ಬ್ರಿಟನ್​​​ನಲ್ಲಿ ತಯಾರಾಗುವ ಜಾಗ್ವಾರ್, ಲ್ಯಾಂಡ್ ರೋವರ್ ಕಾರುಗಳಿಗೆ ಶೇ. 100 ಟ್ಯಾರಿಫ್ ಇದೆ. ಹೀಗೆ ಇತರ ಕೆಲ ಸರಕುಗಳಿಗೆ ಅಧಿಕ ಸುಂಕ ಜಾರಿಯಲ್ಲಿದೆ. ಇವುಗಳನ್ನು ಕಡಿಮೆ ಮಾಡುವ ಬಗ್ಗೆ ಮಾತುಕತೆ, ಸಂಧಾನಗಳು ನಡೆಯುತ್ತಿದ್ದುವು. ಈಗ ಒಪ್ಪಂದ ಅಂತಿಮಗೊಂಡಿರುವುದನ್ನು ಎರಡೂ ದೇಶಗಳ ಪ್ರಧಾನಿಗಳು ಖಚಿತಪಡಿಸಿದ್ದಾರೆ. ಎಫ್​​ಟಿಎನಲ್ಲಿ ಯಾವುದೆಲ್ಲಾ ಅಂತಿಮಗೊಂಡಿವೆ ಎನ್ನುವ ಮಾಹಿತಿ ಸದ್ಯದಲ್ಲೇ ಬರಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries