ಮಳೆಗಾಲ ಆರಂಭದ ಸೂಚನೆಗಳು ಸಿಗುತ್ತಿದೆ. ಆರಂಭದಲ್ಲೇ ಮಳೆ ಅಬ್ಬರಿಸುತ್ತಿದೆ. ಹೀಗಾಗಿ ಮಳೆಗಾಲಕ್ಕಾಗಿ ಏನೆಲ್ಲಾ ತಯಾರಿಗಳು ಬೇಕು ಅನ್ನೋದನ್ನು ನೀವು ಕೂಡ ಮಾಡುತ್ತಿರಬಹುದು. ಹಾಗೆ ಮಳೆ ಆರಂಭಕ್ಕೂ ಮುನ್ನ ನೀವು ಈ 3ರಿಂದ 4 ತಿಂಗಳಿಗೆ ಬೇಕಾಗುವಷ್ಟು ಸಾಂಬಾರ್ ಪುಡಿಯನ್ನು ಮೊದಲೇ ಮಾಡಿಟ್ಟುಕೊಳ್ಳಿ. ಈ ಪುಡಿಯಿಂದ ನೀವು ಬಹಳ ಸುಲಭವಾಗಿ ಮನೆಯಲ್ಲಿ ಮಾಡಿಕೊಳ್ಳಬಹುದು. ನಾವಿದು ಈ ಸಾಂಬಾರ್ ಪುಡಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಅದರಲ್ಲೂ ಮಳೆಗಾಲದಲ್ಲಿ ಈ ಪುಡಿ ಬಳಸಿಕೊಂಡು ಸಾಂಬಾರ್ ಮಾಡಿ ಸವಯುವುದು ಬಹಳ ರುಚಿ ನೀಡಲಿದೆ. ನೀವು ಕೂಡ ಮಳೆಗಾಲಕ್ಕೆ ಬೇಕಾಗುವಷ್ಟು ಈ ಸಾಂಬಾರ್ ಪುಡಿಯನ್ನು ಮೊದಲೇ ಮಾಡಿಟ್ಟುಕೊಳ್ಳಿ. ಮಳೆಗಾಲದಲ್ಲಿ ಬಹಳ ಸುಲಭವಾಗಿ ನೀವು ಕಡಿಮೆ ಸಮಯದಲ್ಲಿ ಸಾಂಬಾರ್ ಮಾಡಲು ಈ ಪುಡಿ ನೆರವಾಗಲಿದೆ.

ಒಂದು ವೇಳೆ ಮಳೆಗಾಲದಲ್ಲಿ ಕರೆಂಟ್ ಇಲ್ಲದಿದ್ದರೆ ಅಥವಾ ದಿನಸಿ ತರಲಾಗದೆ ಇದ್ದರೆ, ಮಾರುಕಟ್ಟೆಯಲ್ಲಿ ಸಿಗುವಂತಹ ಸಾಂಬಾರ್ ಪುಡಿ ಖರೀದಿಸಲು ಆಗದಿದ್ರೆ ಮನೆಯಲ್ಲೇ ಮಾಡುವ ಈ ಪುಡಿಯನ್ನು ಸಾಂಬಾರ್ ಮಾಡಲು ಬಳಸಬಹುದು. ಹಾಗಾದ್ರೆ ನಾವಿಂದು ಸುಲಭವಾಗಿ ಈ ಸಾಂಬಾರ್ ಪುಡಿ ಮನೆಯಲ್ಲಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಾಂಬಾರ್ ಪುಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ತೊಗರಿ ಬೇಳೆ
- ಅರಶಿಣ
- ಕಡಲೆ ಬೇಳೆ
- ಉದ್ದಿನ ಬೇಳೆ
- ಮೆಂತ್ಯ
- ಕಾಳು ಮೆಣಸು
- ಜೀರಿಗೆ
- ಸಾಸಿವೆ
- ಇಂಗು
- ಅಕ್ಕಿ
- ದನಿಯಾ ಕಾಳು
- ಒಣ ಮೆಣಸು
- ಹುಣಸೆ ಹುಳಿ
- ಉಪ್ಪು
ಸಾಂಬಾರ್ ಪುಡಿ ಮಾಡುವ ವಿಧಾನವೇನು?
ನೀವು ಒಂದು ದಿನ ಮೊದಲೇ ಸಾಂಬಾರ್ ಪುಡಿ ಮಾಡಲು ತಯಾರಿ ಆರಂಭಿಸಬೇಕು. ಒಂದು ಕಪ್ ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿಕೊಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಈ ತೊಗರಿ ಬೇಳೆಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಸಣ್ಣ ಉರಿಯಲ್ಲಿ ಇದನ್ನು ಹುರಿದುಕೊಳ್ಳಿ. 5 ನಿಮಿಷದಲ್ಲಿ ಇದು ಬಣ್ಣ ಬದಲಾಗಬಹುದು. ನಂತರ ಇದನ್ನು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಕಡಲೆ ಬೇಳೆ ಕೂಡ ಇದಕ್ಕೆ ಹಾಕಿ ಕೆಂಪಗಾಗುವಂತೆ ಹುರಿದುಕೊಂಡು ತೆಗೆದಿಟ್ಟುಕೊಳ್ಳಿ. ನಂತರ ಉದ್ದಿನ ಬೇಳೆ ಸಹ ಹಾಕಿ ಹುರಿದು ತೆಗೆದಿಡಿ. 1 ಸ್ಪೂನ್ ಅಕ್ಕಿಯನ್ನು ಕೂಡ ಇದೇ ರೀತಿ ಹುರಿದು ತೆಗೆದಿಟ್ಟುಕೊಳ್ಳಿ. ನಂತರ ದನಿಯಾ ಕಾಳುಗಳನ್ನು ಸಹ ಹಾಕಿಕೊಂಡು ಹುರಿದುಕೊಳ್ಳಿ. ಘಮ ಘಮ ಎನ್ನುವಾಗ ತೆಗೆದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ನಂತರ ಜೀರಿಗೆ ಸಹ ಹಾಕಿಕೊಂಡು ತೆಗೆದಿಟ್ಟುಕೊಳ್ಳಿ. ನಂತರ ಸಾಸಿವೆಯನ್ನು ಹೀಗೆ ಮಾಡಿ.
ಈಗ ಮೆಂತ್ಯ ಹಾಗೂ ಕಾಳು ಮೆಣಸು ಕೂಡ ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ. ಕೊನೆಯಲ್ಲಿ ಒಣ ಮೆಣಸು ಕೂಡ ಹಾಕಿ ಹುರಿದುಕೊಳ್ಳಿ. ಇದಕ್ಕೆ ಕರಿಬೇವು ಚಿಟಿಕೆ ಇಂಗು, ಅರಶಿಣ ಸಹ ಬಳಸಿಕೊಳ್ಳಿ ಹಾಗೆ ರುಚಿಗೆ ತಕ್ಕಷ್ಟು ಉಪ್ಪು, ಹುಣಸೆ ಹುಳಿ ಸಹ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ ಎತ್ತಿಟ್ಟುಕೊಳ್ಳಿ. ಈ ಎಲ್ಲಾ ಪದಾರ್ಥಗಳಿ ತಣ್ಣಗಾಗಲು ಬಿಡಿ.
ಎಲ್ಲಾ ಪದಾರ್ಥಗಳು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಎಲ್ಲಾ ವಸ್ತುಗಳನ್ನು ಅದಕ್ಕೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಬಾಕ್ಸ್‌ಗೆ ಹಾಕಿಟ್ಟರೆ 6 ತಿಂಗಳ ಕಾಲ ರುಚಿ ರುಚಿಯ ಸಾಂಬಾರ್‌ಗೆ ನೀವು ಬಳಸಬಹುದು.





