ಇಸ್ಲಾಮಾಬಾದ್: ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಅಸೀಂ ಮುನೀರ್ ಅವರಿಗೆ ಫೀಲ್ಡ್ ಮಾರ್ಷಲ್ ಸ್ಥಾನಕ್ಕೆ ಸರ್ಕಾರ ಬಡ್ತಿ ನೀಡಿದೆ.
'ಭಾರತದೊಟ್ಟಿಗಿನ ಇತ್ತೀಚಿನ ಸಂಘರ್ಷ ದಲ್ಲಿ ಸೇನೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಕ್ಕಾಗಿ ಬಡ್ತಿ ನೀಡಲಾಗಿದೆ' ಎಂದು ಸರ್ಕಾರದ ಅಧಿಕೃತ ಮಾಧ್ಯಮ 'ಪಿಟಿವಿ' ವರದಿ ಮಾಡಿದೆ.
ಪ್ರಧಾನಿ ಶೆಹಬಾಜ್ ಷರೀಪ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯು ಈ ತೀರ್ಮಾನ ಕೈಗೊಂಡಿದೆ.




