ನವದೆಹಲಿ: ಅಂಗವಿಕಲರು ಮತ್ತು ಆಯಸಿಡ್ ದಾಳಿ ಸಂತ್ರಸ್ತರಿಗಾಗಿ ಇ-ಕೆವೈಸಿ ಮಾರ್ಗಸೂಚಿಯಲ್ಲಿ ಬದಲಾವಣೆ ತರುವಂತೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ.
ಡಿಜಿಟಲ್ ಆಯಕ್ಸೆಸ್ ಪಡೆಯುವ ಹಕ್ಕು ಸಂವಿಧಾನದ 21ನೇ ವಿಧಿಯಡಿಯಲ್ಲಿ ಬರುವ ಬದುಕುವ ಹಕ್ಕಿನ ಅಂತರ್ಗತ ಭಾಗ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಆರ್.ಮಹದೇವನ್ ಅವರನ್ನು ಒಳಗೊಂಡ ನ್ಯಾಯಪೀಠವು, 'ಅಂಗವಿಕಲರು ಮತ್ತು ಆಯಸಿಡ್ ದಾಳಿ ಸಂತ್ರಸ್ತರು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಮಾರ್ಗಸೂಚಿಯಲ್ಲಿ ಬದಲಾವಣೆ ತರುವುದು ಅಗತ್ಯ. ಬ್ಯಾಂಕ್ ಖಾತೆ ತೆರೆಯಲು ಮತ್ತು ಕಲ್ಯಾಣ ಯೋಜನೆಗಳ ಸದುಪಯೋಗ ಪಡೆಯಲು ಅದು ನೆರವಾಗಲಿದೆ' ಎಂದು ಹೇಳಿತು.




