ಕಾಸರಗೋಡು: ದೇಶದ ಯೋಧರಿಗೆ ಗೌರವ ಸಲ್ಲಿಸುವುದರ ಜತೆಗೆ ಭಯೋತ್ಪಾದನೆ ವಿರೋಧಿಸಿ, ತ್ರಿವರ್ಣ ಸ್ವಾಭಿಮಾನ ಯಾತ್ರೆ ಕಾಸರಗೋಡಿನಲ್ಲಿ ಹಮ್ಮಿಕೊಳ್ಳಲಾಯಿತು. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಿಂದ ಆರಂಭಗೊಂಡ ತ್ರಿವರ್ಣ ಸ್ವಾಭಿಮಾಣ ಯಾತ್ರೆ ಪಿಲಿಕುಂಜೆಯ ಕರ್ನಲ್ ಖಾನ್ ಬಹದ್ದೂರ್ ಯುದ್ಧ ಸ್ಮಾರಕದಲ್ಲಿ ಸಮಾರೋಪಗೊಂಡಿತು. ಧ್ವಜ ಯಾತ್ರೆಗೆ ನಿವೃತ್ತ ಭೂಸೇನಾ ಅಧಿಕಾರಿ ರಮೇಶ್, ರಾಜೇಂದ್ರನ್, ಸುಕುಮಾರನ್, ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ, ಮಾಧವ ಮಾಸ್ಟರ್, ಗುರುಪ್ರಸಾದ್ ಪ್ರಭು, ಪ್ರಮೀಳಾ ಮಜಲ್, ಪುಷ್ಪಾ ಗೋಪಾಲನ್, ಸುಕುಮಾರ ಕುದುರೆಪಾಡಿ, ಕೆ.ಚಂದ್ರಶೇಖರ, ಶ್ರೀಧರ ಕುಡ್ಲು ನೇತೃತ್ವ ನೀಡಿದರು. ಮಹಿಳೆಯರು ಸೇರಿದಂತೆ ನೂರಾರು ಮಂದಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.




