ಕಾಸರಗೋಡು: ಮಳೆಗಾಲಕ್ಕೆ ಮುಂಚಿತವಾಗಿ, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರಿನ ದಾಸ್ತಾನು, ಭೂಕುಸಿತ ಹಾಗೂ ಇತರ ಅನಾನುಕೂಲತೆಗಳನ್ನು ನಿವಾರಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನೇತೃತ್ವದಲ್ಲಿ ಅಧಿಕಾರಿಗಳ ಟಾಸ್ಕ್‍ಫೋರ್ಸ್ ರಚಿಸಿ ಯೋಜನೆ ಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಮಟ್ಟದ ತುರ್ತು ಯೋಜನೆಯನ್ನು ಮಂಡಿಸಲಾಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಿ, ಸಮಸ್ಯೆಗಳನ್ನು ಮನಗಂಡು ಇವುಗಳಿಗೆ ಪರಿಹಾರಗಳನ್ನು ಸೂಚಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ತುರ್ತು ಯೋಜನೆಯನ್ನು ಮಂಡಿಸಲಾಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಿ, ಸಮಸ್ಯೆಗಳನ್ನು ನಿರ್ಣಯಿಸಿ, ಪರಿಹಾರಗಳನ್ನು ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ ಬಗ್ಗೆ ಜನಪ್ರತಿನಿಧಿಗಳು ಎತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಖುದ್ದು ಸ್ಥಳ ಸಂದರ್ಶನ ನಡೆಸಿದ ನಂತರ, ರಾಷ್ಟ್ರೀಯ ಹೆದ್ದಾರಿಯ ವಿವಿಧ ಸ್ಥಳಗಳಲ್ಲಿ ಪ್ರಸಕ್ತ 101 ಸಮಸ್ಯೆಗಳನ್ನು ಗುರುತಿಸಲಾಗಿದೆ. ಈ ಸಮಸ್ಯೆಗಳನ್ನು ಗೂಗಲ್ ಶೀಟ್‍ಗಳಲ್ಲಿ ಅಳವಡಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗುತ್ತಿದೆ. ಪ್ರತಿಯೊಂದು ಸಮಸ್ಯೆಯ ಪ್ರಸಕ್ತ ಇರುವ ಸ್ಥಿತಿಯನ್ನು ಅದರಲ್ಲಿ ದಾಖಲಿಸಲಾಗುತ್ತಿದೆ.
ಇವುಗಳಲ್ಲಿ ಪರಿಹರಿಸಲಾದ ಸಮಸ್ಯೆಗಳು, ಭಾಗಶಃ ಪರಿಹರಿಸಲಾದ ಸಮಸ್ಯೆಗಳು ಮತ್ತು ಪರಿಹರಿಸಲು ಉಳಿದಿರುವ ಸಮಸ್ಯೆಗಳು ಎಂಬುದಾಗಿ ಮೂರು ವಿಭಾಗಗಳನ್ನು ಮಾಡಲಾಗಿದ್ದು, ಸಹಾಯಕ ಜಿಲ್ಲಾಧಿಕಾರಿಗಳಾದ ಎಂ. ರಮೀಜ್ ರಾಜಾ(ಎಲ್.ಎ), ಎಸ್. ಬಿಜು(ಎಲ್.ಎ. ಎನ್.ಎಚ್)ಅವರು ತಜ್ಞ ಸಮಿತಿಯ ನೇತೃತ್ವ ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಪ್ರತಿದಿನದ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಿ ಸಮಿತಿಗೆ ಸಲಹೆಗಳನ್ನು ನೀಡಲಿದ್ದಾರೆ. ಹೊಸದುರ್ಗ, ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಆಯಾ ತಹಸೀಲ್ದಾರ್‍ಗಳಿಗೆ ಹೊಣೆಗಾರಿಕೆ ವಹಿಸಿಕೊಡಲಾಘಿದ್ದು, ತಹಸೀಲ್ದಾರರು, ಅವರ ಅಗತ್ಯ ಸಹಾಯಕರೊಂದಿಗೆ, ಒಂದು ತಂಡವನ್ನು ರಚಿಸಲಿದ್ದಾರೆ.
ಈ ತಂಡಗಳು ಮಸ್ಯೆಗಳಿಗೆ ತ್ವರಿತವಾಗಿ ಪರಿಹಾರಗಳನ್ನು ಕಂಡುಕೊಳ್ಳಲು ಕ್ರಮ ಕೈಗೊಳ್ಳುತ್ತಿದ್ದು, ಇಲ್ಲಿಯವರೆಗೆ, 10 ಸಮಸ್ಯೆಗಳನ್ನು ಪೂರ್ಣವಾಗಿ ಹಾಗೂ 13 ಸಮಸ್ಯೆಗಳನ್ನು ಭಾಗಶಃ ಪರಿಹರಿಸಲಾಗಿದೆ. ಎರಡು ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಲ್ಲಾ ಉದ್ಯೋಗಿಗಳಿಗೆ ಸೂಚನೆ ನೀಡಿದ್ದಾರೆ.




.jpg)
