ಕಾಸರಗೋಡು: ಕೇರಳ ಅರಣ್ಯ ಸಂರಕ್ಷಣಾ ಸಿಬ್ಬಂದಿ ಸಂಘದ (ಕೆಎಫ್‍ಪಿಎಸ್‍ಎ) 49 ನೇ ರಾಜ್ಯ ಸಮ್ಮೇಳನ ಮೇ 25ರಿಂದ 27ರ ವರೆಗೆ ಕಾಸರಗೋಡಿನಲ್ಲಿ ನಡೆಯಲಿದೆ. ಸಮಾವೇಶಕ್ಕೆ ಪೂರ್ವಭಾವಿಯಾಗಿ ಘೋಷಣಾ ಮೆರವಣಿಗೆ, ಸಾಮಾನ್ಯ ಸಭೆ, ಪ್ರತಿನಿಧಿ ಸಭೆ ನಡೆಯಲಿರುವುದಾಗಿ ಸಂಘಟನೆ ರಾಜ್ಯಾಧ್ಯಕ್ಷ ಕೆ.ಎ ಸೇತುಮಾಧವನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಮಾವೇಶದ ಅಂಗವಾಗಿ ಎಲ್ಲಾ ಜಿಲ್ಲೆಗಳಲ್ಲಿ ಕ್ರೀಡಾ ಸ್ಪರ್ಧೆಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣ ಹಾಗೂ ಸಾರ್ವಜನಿಕ ಜಾಗೃತಿ ಅಧಿವೇಶನಗಳನ್ನು ನಡೆಸಲಾಗಿದೆ.
ಕೇರಳದ ಅರಣ್ಯ ಸಂರಕ್ಷಣಾ ಇಲಾಖೆಯು ಅರಣ್ಯ ವೀಕ್ಷಕರಿಂದ ತೊಡಗಿ ಉಪ ರೇಂಜ್ ಅರಣ್ಯ ಅಧಿಕಾರಿಗಳ ವರೆಗಿನ ಹಕ್ಕು ಸಂರಕ್ಷಣೆಗಾಗಿ 1953ರಲ್ಲಿ ರಚಿಸಲಾಗಿರುವ ಸಂಘಟನೆ ಹಲವು ಬಿಕ್ಕಟ್ಟು ಎದುರಿಸುತ್ತಾ ಬಂದಿದ್ದು, ಪ್ರಸಕ್ತ ಸಂಘಟನೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಮಾವೇಶದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು. ಕೇರಳದಲ್ಲಿ ಅರಣ್ಯ ಸಂರಕ್ಷಣೆ ಕಾರ್ಯಾಚರಣೆ ಮಧ್ಯೆ 41 ಮಂದಿ ಅರಣ್ಯ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಕೇರಳದ ಪರಿಸರ ಸಂರಕ್ಷಣಾ ಕೇಂದ್ರದಿಂದ ಕೂಡಿದ ಅರಣ್ಯ ಸಂರಕ್ಷಣಾ ಕಾರ್ಯ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಅಲ್ಲದೆ, ನಾಗರಿಕರ ಮತ್ತು ವನ್ಯಜೀವಿಗಳ ರಕ್ಷನೆ ಸಂದರ್ಭ ಅರಣ್ಯ ಸಂರಕ್ಷಣಾ ಇಲಾಖೆ ನೌಕರರು ಸಾರ್ವಜನಿಕರು, ರಾಜಕೀಯ, ವಿವಿಧ ರೈತರ ಪರ ಹೋರಾಟದ ನೆಪದಲ್ಲಿ ನಕಲಿ ಸಂಘಟನೆಗಳಿಂದಲೂ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಎಲ್ಲ ಅಂಶಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠೀಯಲ್ಲಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಆರ್. ದಿನೇಶ್, ರಾಜ್ಯ ಸಮಿತಿ ಉಪಾಧ್ಯಕ್ಷ ಪಿ. ವಿನೋದ್, ಕೋಶಾಧಿಕಾರಿ ಕೆ. ಬೀರಾನ್ ಕುಟ್ಟಿ, ಪ್ರಧಾನ ಸಂಚಾಲಕ ಎನ್.ವಿ.ಸತ್ಯನ್, ರಾಜ್ಯ ಕಾರ್ಯದರ್ಶಿ ಪಿ.ಕೆ. ಶಿಬು, ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಎನ್. ರಮೇಶ ಉಪಸ್ಥಿತರಿದ್ದರು.




