ನವದೆಹಲಿ : ಪಹಲ್ಗಾಂ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರು, ದಕ್ಷಿಣ ಕಾಶ್ಮೀರದ ಕಾಡಿನಲ್ಲಿ ಅಡಗಿದ್ದಾರೆ ಎಂಬ ಶಂಕೆ ಇದ್ದು ಮತ್ತೊಂದೆಡೆ ಅವರು ತಮಿಳುನಾಡು ಮೂಲಕ ಶ್ರೀಲಂಕಾಗೆ ತೆರಳಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಉಗ್ರರು ಪೊಲೀಸರ ಕೈಗೆ ಸಿಕ್ಕಿಬೀಳುತ್ತಿಲ್ಲ.
ಅದಕ್ಕೆ ಕಾರಣ ಉಗ್ರರು ಬಳಸುತ್ತಿರುವ ಚೀನಿ ಮೊಬೈಲ್ ಎನ್ನಲಾಗ್ತಿದೆ.
ಉಗ್ರರ ಬಳಿ ಅತ್ಯಾಧುನಿಕ ಸಂಪರ್ಕ ಸಾಧನಗಳಿವೆ. ಅದರಲ್ಲಿ ಸ್ಯಾಟ್ ಫೋನ್‌ಗಳಂಥಹ ಹೊಸ ಹೊಸ ತಂತ್ರಜ್ಞಾನವೂ ಅವರ ಬಳಿ ಇದೆ. ಇದೀಗ ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ ಭಯೋತ್ಪಾದಕರು ಚೀನಾದ ಹುವಾವೇ ಮೊಬೈಲ್ ಬಳಕೆ ಮಾಡಿದ್ದಾರೆ ಎನ್ನಲಾಗ್ತಿದೆ. ಉಗ್ರರು ಬಳಸಿದ ಹುವಾವೇ
ಫೋನ್‌ಗೆ ಸಿಮ್ ಕೂಡಾ ಬೇಕಾಗಿಲ್ಲ. ಆ ಮೊಬೈಲ್ಗಳು ಸಿಮ್ ಇಲ್ಲದೇ ಕಾರ್ಯನಿರ್ವಹಿಸಬಲ್ಲವು. ಆದ್ದರಿಂದ ಉಗ್ರರ ಬಳಿ ಇರೋ ಸಾಧನಗಳನ್ನು ಟ್ರ್ಯಾಕ್ ಮಾಡೋದು ಕಷ್ಟ. ಇದೇ ಕಾರಣಕ್ಕೆ ದಾಳಿಕೋರರ ಪತ್ತೆ ಕಾರ್ಯ ಜಟಿಲವಾಗ್ತಿದೆ ಎಂದು ತಿಳಿದುಬಂದಿದೆ
ಎನ್ಐಎ ತನಿಖಾಧಿಕಾರಿಗಳು ಮೂವರು ಓವರ್ ಗ್ರೌಂಡ್ ವರ್ಕರ್ಸ್ನ್ನು ಬಂಧಿಸಿದ್ದಾರೆ. ಅವರು ದಾಳಿಯ 2 ದಿನ ಮೊದಲು ಉಗ್ರರಿಗೆ ಊಟೋಪಚಾರ ಮಾಡಿದ್ದೇವೆ ಎಂದಿದ್ದಾರೆ. ಓರ್ವ ವ್ಯಕ್ತಿ ಪ್ರವಾಸಿಗರಿಗೆ ಕುದುರೆಗಳ ಹ್ಯಾಂಡ್ಲರ್ ಆಗಿ ಕೆಲಸ ಮಾಡುತ್ತಿದ್ದು, ಮತ್ತೊಬ್ಬ ಇಡೀ ಪ್ರದೇಶದ ಮೇಲೆ ಕಣ್ಗಾವಲು ಇರಿಸಿದ್ದ. 3ನೇ ಆರೋಪಿ ಬೈಸರನ್ ಕಣಿವೆಯಲ್ಲಿ ದಾಳಿ ಮಾಡಲು ಸಲಹೆ ನೀಡಿದ್ದ ಎನ್ನಲಾಗಿದೆ.




