ಕಾಸರಗೋಡು: ನಗರದ ಕಾಳ್ಯಂಗಾಡು ನಿವಾಸಿ, ಖ್ಯಾತ ಯಕ್ಷಗಾನ ಕಲಾವಿದ ದಿ.ಬಣ್ಣದ ಕುಟ್ಯಪ್ಪು ಅವರ ಪುತ್ರ ಸುಂದರ್ ಕೋಹಿನೂರ್(80)ನಿಧನರಾದರು. ಹೊಲಿಗೆ ವೃತ್ತಿ ನಡೆಸುತ್ತಿದ್ದ ಇವರು, ವಿವಿಧ ಧಾರ್ಮಿಕ ರಂಗಗಳಲ್ಲಿ ಸಕ್ರಿಯರಾಘಿದ್ದರು. ಯಕ್ಷಗಾನ ಹವ್ಯಾಸಿ ಕಲಾವಿದರಾಗಿದ್ದ ಇವರು, ಯಕ್ಷಗಾನದಲ್ಲಿ ವೇಷ ಹಾಕುತ್ತಿದ್ದರಲ್ಲದೆ, ಯಕ್ಷಗಾನ ತಾಳಮದ್ದಳೆಯಲ್ಲೂ ಅರ್ಥಧಾರಿಗಳಾಗಿದ್ದರು. ಕಾಸರಗೋಡಿನಲ್ಲಿ ಹೊಲಿಗೆದಾರರ ಸಂಘಟನೆ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಸಂಘಟನೆ ಮಾಜಿ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

