ಬದಿಯಡ್ಕ: ಕಣ್ಣೂರು ವಿಶ್ವವಿದ್ಯಾಲಯದ ಬಿಎಸ್‍ಸಿ ಜಿಯೋಗ್ರಫಿಯಲ್ಲಿ ಪ್ರತಿಭಾನ್ವಿತ ಚೆಸ್ ತಾರೆ ಗಾನಸಮೃದ್ಧಿ ಕಾನಕಜೆ ಪ್ರಥಮ ರ್ಯಾಂಕ್ ಪಡೆದಿರುತ್ತಾಳೆ. ಕುಂಬ್ಡಾಜೆ ಬಳಿಯ ಕಾನಕಜೆ ಗೋಪಾಲಕೃಷ್ಣ ಭಟ್ ಮತ್ತು ನಯನ ದಂಪತಿಗಳ ಪುತ್ರಿಯಾದ ಈಕೆ ಚೆಸ್ ಆಟದಲ್ಲಿ ಮುಂದಿದ್ದಾಳೆ. ಕಣ್ಣೂರು ವಿಶ್ವವಿದ್ಯಾಲಯಕ್ಕಾಗಿ ಕಳೆದ ಮೂರು ವರ್ಷಗಳಿಂದ ಸೌತ್‍ಝೋನ್ ಇಂಟರ್ ಯೂನಿವರ್ಸಿಟಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಳು. ಪೆರ್ಲ ನಾಲಂದ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಈಕೆ ಶಾಲಾ ಕಾಲೇಜು ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿರುತ್ತಾಳೆ.




-%20Gana%20Samrudhi.jpg)
