HEALTH TIPS

ನೀವು ಸ್ವಾರ್ಥಿಯೇ, ವಿನಮ್ರರೇ ಎಂಬುದನ್ನು ಹೇಳುತ್ತೆ ನೀವು ಕೈ ಕಟ್ಟಿ ನಿಲ್ಲುವ ಭಂಗಿ

ಸಾಮಾನ್ಯವಾಗಿ ಕೈ ಕಟ್ಟಿ (arm fold) ನಿಲ್ಲುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತೆ ಅಲ್ವಾ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕೈಕಟ್ಟಿ ನಿಲ್ಲುತ್ತಾರೆ ಅಥವಾ ಕೈಕಟ್ಟಿ ಕುಳಿತುಕೊಳ್ಳುತ್ತಾರೆ. ಹೀಗೆ ಕೈ ಕಟ್ಟಿ ನಿಲ್ಲುವ ಭಂಗಿಯಿಂದಲೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಬಹುದಂತೆ.

ಹೌದು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳ ಮೂಲಕ, ಸಾಮುದ್ರಿಕ ಶಾಸ್ತ್ರದಲ್ಲಿ ದೇಹಕಾರದ ಮೂಲಕ ನಮ್ಮ ವ್ಯಕ್ತಿತ್ವದ ರಹಸ್ಯವನ್ನು (secret personality) ನಾವೇ ತಿಳಿದುಕೊಳ್ಳುವಂತೆ, ಕೈ ಕಟ್ಟಿ ನಿಲ್ಲುವ ಶೈಲಿಯ ಮೂಲಕವೂ ನಮ್ಮಲ್ಲಿ ಅಡಗಿರುವ ನಿಗೂಢ ಸ್ವಭಾವವನ್ನು ನಾವೇ ಪರೀಕ್ಷಿಸಬಹುದು. ನೀವು ಸ್ವಾರ್ಥ ಸ್ವಭಾವದವರೇ ಅಥವಾ ವಿನಮ್ರರೇ ಎಂಬುದನ್ನು ನೀವು ಕೈ ಕಟ್ಟಿ ನಿಲ್ಲುವ ಸ್ಟೈಲ್‌ನಿಂದ ತಿಳಿಯಿರಿ.

ನೀವು ಕೈ ಕಟ್ಟಿ ನಿಲ್ಲುವ ಭಂಗಿಯಿಂದಲೂ ತಿಳಿಯಬಹುದು ನಿಮ್ಮ ರಹಸ್ಯ ಗುಣ ಸ್ವಭಾವ:

ಈ ನಿರ್ದಿಷ್ಟ ವ್ಯಕ್ತಿತ್ವ ಪರೀಕ್ಷೆಯ ಮೋಜಿನ ಆಟವನ್ನು okdiario.com ಎಂಬ ಪೇಜಲ್ಲಿ ಶೇರ್‌ ಮಾಡಲಾಗಿದೆ. ಇದರಲ್ಲಿ ನೀವು ಕೈ ಕಟ್ಟಿ ನಿಲ್ಲುವ ಭಂಗಿಯ ಮೂಲಕವೇ ನೀವು ಶಾಂತ ಸ್ವಭಾವದವರೇ, ದೃಢ ನಿಶ್ಚಯವನ್ನು ಹೊಂದಿರುವವರೇ ಅಥವಾ ಸಮಸ್ಯೆಗಳನ್ನು ಎದುರಿಸಲು ತೀರಾ ಕಷ್ಟಪಡುವವರೇ ಎಂಬುದನ್ನು ಪರೀಕ್ಷಿಸಬಹುದಾಗಿದೆ.

ಆಯ್ಕೆ 1: ನೀವು ಆಯ್ಕೆ ಒಂದರಲ್ಲಿ ತೋರಿಸಿರುವಂತೆ ಬಲಗೈನಿಂದ ಎಡಗೈ ತೋಳು ಹಿಡಿದು ಕೈ ಮಡಚಿ ನಿಲ್ಲುವ ಅಭ್ಯಾಸವನ್ನು ಹೊಂದಿದ್ದರೆ, ನೀವು ಸಾಮರಸ್ಯ ಮತ್ತು ಶಾಂತಿಯನ್ನು ಗೌರವಿಸುವ ವ್ಯಕ್ತಿಯೆಂದು ಅರ್ಥ. ನೀವು ಇತತರೊಂದಿಗೆ ತುಂಬಾನೇ ವಿನಮ್ರತೆಯಿಂದ ವರ್ತಿಸುತ್ತೀರಿ. ತುಂಬಾನೇ ಶಾಂತ ಸ್ವಭಾವದವರಾದ ನೀವು ಘರ್ಷಣೆಗಳು, ಜಗಳಗಳನ್ನು ಇಷ್ಟಪಡುವುದಿಲ್ಲ ಮತ್ತು ಜಗಳವಾದಾಗ ನ್ಯಾಯಯುತ ಪರಿಹಾರವನ್ನು ಬಯಸುವವರಾಗಿರುತ್ತೀರಿ. ಒಟ್ಟಾರೆಯಾಗಿ ಸುತ್ತಮುತ್ತಲಿನ ಜನರು ನಿಮ್ಮನ್ನು ಶಾಂತಿಪ್ರಿಯರಾಗಿಯೇ ಕಾಣುತ್ತಾರೆ.

ಆಯ್ಕೆ 2: ಎರಡನೇ ಆಯ್ಕೆಯಲ್ಲಿ ತೋರಿಸಿರುವಂತೆ ಎಡಗೈ ಮೇಲೆ ಬಲಗೈ ಇಟ್ಟು ಕೈ ಕಟ್ಟಿ ನಿಲ್ಲುವ ಅಭ್ಯಾ ನಿಮಗಿದ್ದರೆ ನೀವು ದೃಢ ನಿಶ್ಚಯವನ್ನು ಹೊಂದಿರುವ ವ್ಯಕ್ತಿಯೆಂದು ಅರ್ಥ. ನೀವು ಮಾಡಬೇಕೆಂದಿದ್ದ ಕಾರ್ಯವನ್ನು ಎಷ್ಟೇ ಕಷ್ಟವಾದರೂ ಮಾಡಿ ತೀರಿಸುತ್ತೀರಿ. ಈ ನಿಮ್ಮ ಛಲವೇ ನಿಮ್ಮನ್ನು ಗುರಿಯತ್ತ ಕೊಂಡೊಯ್ಯುತ್ತದೆ. ಈ ನಿಮ್ಮ ಸ್ವಭಾವ ಕೆಲವೊಂದು ಬಾರಿ ಹಠಮಾರಿತನದಂತೆ ಕಾಣಬಹುದು. ಮತ್ತು ನೀವು ನಿಮ್ಮ ಅಗತ್ಯಗಳಿಗೆ ಹೆಚ್ಚಾಗಿ ಆದ್ಯತೆ ನೀಡುವ ಕಾರಣ ಜನ ನಿಮ್ಮನ್ನು ಸ್ವಾರ್ಥಿ ಎಂದು ಅರ್ಥೈಸಿಕೊಳ್ಳುತ್ತಾರೆ. ಹೀಗಿದ್ದರೂ ಕೂಡಾ ನಿಮ್ಮ ಬಲವಾದ ಇಚ್ಛಾಶಕ್ತಿ ಇತರರಿಗೆ ಸ್ಫೂರ್ತಿ ನೀಡುತ್ತದೆ ಅಂತಾನೇ ಹೇಳಬಹುದು.

ಆಯ್ಕೆ 3: ನೀವು ಮೇಲಿನ ಚಿತ್ರದಲ್ಲಿ ಆಯ್ಕೆ ಮೂರರಲ್ಲಿ ನೀಡಿರುವಂತೆ ಕೈ ಕಟ್ಟಿ ನಿಲ್ಲುವ ಅಭ್ಯಾಸವನ್ನು ಹೊಂದಿದ್ದರೆ, ನೀವು ಒತ್ತಡವನ್ನು ನಿರ್ವಹಿಸಲು ಹೆಣಗಾಡುವವರು ಎಂದರ್ಥ. ಹೌದು ನಿಮಗೆ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕಷ್ಟಕರವಾಗಬಹುದು. ವೈಯಕ್ತಿಕ ಸಮಸ್ಯೆಗಳ ಮೇಲೆಯೇ ಗಮನ ಹರಿಸುವ ನಿಮಗೆ ಇತರರೊಂದಿಗೆ ಸಹಾನುಭೂತಿಯಿಂದ ವರ್ತಿಸುವುದು ಕಷ್ಟಸಾಧ್ಯವಾಗುತ್ತದೆ. ಅಲ್ಲದೆ ನಿಮಗೆ ಆಗಾಗ್ಗೆ ಹತಾಶೆ ಮತ್ತು ಕೋಪದ ಭಾವನೆ ಉಂಟಾಗುತ್ತದೆ. ಹಾಗಾಗಿ ನೀವು ಭಾವನೆಗಳನ್ನು ನಿರ್ವಹಿಸಲು ಕಲಿಯುವುದು ತುಂಬಾ ಮುಖ್ಯ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries