ನವದೆಹಲಿ: ಭಾರತದ ಸೃಜನಶೀಲ ಮತ್ತು ಡಿಜಿಟಲ್ ಮಾಧ್ಯಮ ಉದ್ಯಮಗಳಿಗೆ ಪ್ರಮುಖ ಮುನ್ನಡೆಯನ್ನು ಸೂಚಿಸುವ ನಿಟ್ಟಿನಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಇಂದು ವೇವ್ಸ್ ಶೃಂಗಸಭೆ 2025ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ (IICT) ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.
ಭಾರತ ದೇಶದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಪ್ರತಿಷ್ಠಿತ ಐಐಟಿಗಳು ಮತ್ತು ಐಐಎಂಗಳ ಮಾದರಿಯಲ್ಲಿ ಭಾರತೀಯ ಸೃಜನಶೀಲ ತಂತ್ರಜ್ಞಾನ ಸಂಸ್ಥೆ (ಐಐಸಿಟಿ)ಯನ್ನು ಪ್ರಾರಂಭಿಸುವುದಾಗಿ ಕೇಂದ್ರ ಸಚಿವ ಅಶ್ವಿನಿ ವ್ಯೆಷ್ಣವ್ ಘೋಷಿಸಿದ್ದಾರೆ. ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿ (AVGC-XR) ವಲಯಕ್ಕೆ ರಾಷ್ಟ್ರೀಯ ಕೇಂದ್ರವಾಗಲಿರುವ ಈ ಸಂಸ್ಥೆಯು ಈಗಾಗಲೇ ಕೆಲಸವನ್ನು ಪ್ರಾರಂಭಿಸಿದೆ.
ಇಂದು ನಡೆದ ವೇವ್ಸ್ ಶೃಂಗಸಭೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಈ ಸಂಸ್ಥೆಯನ್ನು ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ (AVGC-XR) ಕ್ಷೇತ್ರದ ರಾಷ್ಟ್ರೀಯ ಕೇಂದ್ರವೆಂದು ಉಲ್ಲೇಖಿಸಿದರು. ಐಐಸಿಟಿ ಸ್ಥಾಪಿಸಲು ಸರ್ಕಾರ ಕೆಲವು ತಂತ್ರಜ್ಞಾನ ಮತ್ತು ಮಾಧ್ಯಮ ದೈತ್ಯರೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ. ಇವುಗಳಲ್ಲಿ NVIDIA, Google, Apple, Microsoft, Meta, Star India ಮತ್ತು Adobe ನಂತಹ ಕಂಪನಿಗಳು ಸೇರಿವೆ. ಪ್ರತಿಷ್ಠಿತ ಐಐಟಿಗಳು ಮತ್ತು ಐಐಎಂಗಳ ಮಾದರಿಯಲ್ಲಿ ಎಫ್‌ಐಸಿಸಿಐ ಮತ್ತು ಸಿಐಐ ಜೊತೆಗಿನ ಕಾರ್ಯತಂತ್ರದ ಸಹಯೋಗದೊಂದಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಐಐಸಿಟಿಯನ್ನು ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರವಾಗಿ ಸ್ಥಾಪಿಸಲಿದೆ.
“ಐಐಸಿಟಿ ಮನರಂಜನಾ ಉದ್ಯಮಕ್ಕೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಅದರ ವಿಸ್ತರಣೆಗೆ ಸಹಾಯ ಮಾಡುತ್ತದೆ. ಪ್ರಧಾನಿ ಮೋದಿ ಐಐಸಿಟಿಗೆ 400 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಮಹಾರಾಷ್ಟ್ರ ಸರ್ಕಾರ ಅದಕ್ಕೆ ಭೂಮಿಯನ್ನು ಒದಗಿಸಿದೆ. ಎನ್ವಿಡಿಯಾ, ಗೂಗಲ್, ಆಪಲ್, ಮೈಕ್ರೋಸಾಫ್ಟ್, ಸ್ಟಾರ್ ಇಂಡಿಯಾ, ಮೆಟಾ, ಅಡೋಬ್‌ನಂತಹ ಜಾಗತಿಕ ತಂತ್ರಜ್ಞಾನ ದೈತ್ಯರು ಐಐಸಿಟಿಯನ್ನು ವಿಶ್ವ ದರ್ಜೆಯ ಸಂಸ್ಥೆಯನ್ನಾಗಿ ಮಾಡಲು ಸಹಾಯ ಮಾಡುತ್ತಿದ್ದಾರೆ” ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಐಐಸಿಟಿ ಮೊದಲ ಹಂತ ಮುಂಬೈನ ಪೆಡ್ಡರ್ ರಸ್ತೆಯಲ್ಲಿರುವ NFDC ಕಟ್ಟಡದಲ್ಲಿದೆ. ಇದು ಗೇಮಿಂಗ್ ಲ್ಯಾಬ್‌ಗಳು, ಅನಿಮೇಷನ್ ಲ್ಯಾಬ್‌ಗಳು, ಎಡಿಟ್, ಸೌಂಡ್ ಸೂಟ್‌ಗಳು, ವರ್ಚುವಲ್ ಪ್ರೊಡಕ್ಷನ್ ಸೆಟಪ್‌ಗಳು, ಇಮ್ಮರ್ಸಿವ್ ಸ್ಟುಡಿಯೋಗಳು, ಪ್ರಿವ್ಯೂ ಥಿಯೇಟರ್ ಮತ್ತು ಬಹು ಸ್ಮಾರ್ಟ್ ತರಗತಿ ಕೊಠಡಿಗಳಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಗೋರೆಗಾಂವ್‌ನಲ್ಲಿರುವ ಫಿಲ್ಮ್ ಸಿಟಿಯ 2ನೇ ಹಂತದಲ್ಲಿ 10 ಎಕರೆ ವಿಶೇಷ ಕ್ಯಾಂಪಸ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಮುಂಬರುವ ಅವಧಿಯಲ್ಲಿ, ದೇಶಾದ್ಯಂತ ಸೃಜನಶೀಲ ಪರಿಸರ ವ್ಯವಸ್ಥೆಗಳನ್ನು ವಿಕೇಂದ್ರೀಕರಿಸಲು ಮತ್ತು ಪೋಷಿಸಲು ಭಾರತದ ವಿವಿಧೆಡೆ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಅವರು ಹೇಳಿದ್ದಾರೆ.




