HEALTH TIPS

Ind-Pak Tensions: S-400 ವ್ಯವಸ್ಥೆ ಭದ್ರ; ಪಾಕ್ ಸುಳ್ಳುಗಳ ಬಯಲಿಗೆಳೆದ ಭಾರತ

ನವದೆಹಲಿ: ಪಾಕಿಸ್ತಾನ ಸಶಸ್ತ್ರ ಪಡೆಗಳು ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಲು ಯತ್ನಿಸುತ್ತಿವೆ. ಗಡಿಯಲ್ಲಿ ಡ್ರೋನ್‌, ಕ್ಷಿಪಣಿ ದಾಳಿಯನ್ನು ಮುಂದುವರಿಸಿದ್ದು, ಶ್ರೀನಗರದ, ಅವಂತಿಪುರ ಹಾಗೂ ಉಧಮ್‌ಪುರದಲ್ಲಿ ವೈದ್ಯಕೀಯ ಸೌಕರ್ಯಗಳು, ಶಾಲೆಗಳ ಮೇಲೆ ದಾಳಿ ನಡೆಸುತ್ತಿವೆ.

ವಿದೇಶಾಂಗ ಸಚಿವಾಲಯ (ಎಂಇಎ) ಹಾಗೂ ಭದ್ರತಾ ಪಡೆ ಅಧಿಕಾರಿಗಳು ಇಂದು (ಶನಿವಾರ, ಮೇ 10) ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಅವರು ಹೇಳಿದ ‍ಪ್ರಮುಖಾಂಶಗಳು ಇಲ್ಲಿವೆ.

ವಿಕ್ರಮ್‌ ಮಿಶ್ರಿ

  • ಪಾಕಿಸ್ತಾನ ನಡೆಸುತ್ತಿರುವ ಕೃತ್ಯಗಳು ಪ್ರಚೋದನಾಕಾರಿಯಾಗಿದ್ದು, ಉದ್ವಿಗ್ನತೆಗೆ ಕಾರಣವಾಗಿವೆ

  • ಪಾಕಿಸ್ತಾನದ ದಾಳಿಗೆ ತಕ್ಕಂತೆ ಭಾರತ ಪ್ರತಿಕ್ರಿಯಿಸಿದೆ

  • ಧಾರ್ಮಿಕ ಸ್ಥಳಗಳ ಮೇಲೆ ಭಾರತ ಕ್ಷಿಪಣಿ ದಾಳಿ ಮಾಡಿದೆ ಎಂಬ ಪಾಕ್‌ ಹೇಳಿಕೆ ಹಾಸ್ಯಾಸ್ಪದ

  • ಪಾಕ್‌ ಪಡೆಗಳು ನಡೆಸಿದ ಶೆಲ್‌ ದಾಳಿಯಲ್ಲಿ ಒಬ್ಬ ಅಧಿಕಾರಿ ಹುತಾತ್ಮರಾಗಿದ್ದಾರೆ.

  • ಕರ್ನಲ್ ಸೋಫಿಯಾ ಖುರೇಷಿ

    • ಪಾಕ್‌ ಕ್ರಮಕ್ಕೆ ಸೂಕ್ತ ಪ್ರತ್ಯುತ್ತರ ನೀಡಲಾಗಿದೆ

    • ಶ್ರೀನಗರ, ಅವಂತಿಪುರ ಮತ್ತು ಉಧಮ್‌ಪುರಗಳಲ್ಲಿನ ವೈದ್ಯಕೀಯ ಸೌಲಭ್ಯಗಳ ಮೇಲೆ ಪಾಕ್‌ ಪಡೆಗಳು ದಾಳಿ ನಡೆಸಿವೆ

    • ಪಂಜಾಬ್‌ನಲ್ಲಿರುವ ವಾಯುನೆಲೆ ಮೇಲೆ ದಾಳಿ ಮಾಡುವ ಸಲುವಾಗಿ ಪಾಕಿಸ್ತಾನ ಸೇನೆಯು ಇಂದು ಬೆಳಗಿನ ಜಾವ 1.40 ಸುಮಾರಿಗೆ ಹೈಸ್ಪೀಡ್‌ ಕ್ಷಿಪಣಿಗಳನ್ನು ಉಡಾಯಿಸಿದೆ

    • ಪಾಕ್‌ ಸೇನೆ ಗಡಿ ಪ್ರದೇಶಗಳಲ್ಲಿ ತನ್ನ ಸೈನಿಕರ ಜಮಾವಣೆ ಹೆಚ್ಚಿಸುತ್ತಿದೆ

    • ಪಶ್ಚಿಮ ಪ್ರದೇಶದಲ್ಲಿರುವ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಡ್ರೋನ್‌ಗಳು, ದೀರ್ಘ ಶ್ರೇಣಿಯ ಶಸ್ತ್ರಾಸ್ತ್ರಗಳು ಮತ್ತು ಇತರ ಯುದ್ಧ ಸಾಮಗ್ರಿಗಳು, ಜೆಟ್‌ಗಳನ್ನು ಬಳಸಿದ ಪಾಕ್‌

    • ಭಾರತದಲ್ಲಿ ವಾಯುನೆಲೆಗಳು ಹಾಗೂ ಸೇನಾ ನೆಲೆಗಳನ್ನು ನಾಶಮಾಡಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ, ಅದನ್ನು ಅಲ್ಲಗಳೆದ ಖುರೇಷಿ, ವಾಸ್ತವ ಚಿತ್ರಗಳು ಮತ್ತು ಸಂಬಂಧಿತ ದಾಖಲೆಗಳನ್ನು ಪ್ರದರ್ಶಿಸಿದ್ದಾರೆ.

    • ಸೇನಾ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ ಎಂಬ ಪಾಕ್‌ ಹೇಳಿಕೆ 'ಸಂಪೂರ್ಣ ಸುಳ್ಳು' ಎಂದು ಪ್ರತಿಪಾದಿಸಿದ್ದಾರೆ.

    • ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್

      • ಪಾಕಿಸ್ತಾನ ದಾಳಿಗೆ ಪ್ರತಿಯಾಗಿ ಭಾರತೀಯ ಪಡೆಗಳು, ನಿರ್ದಿಷ್ಟ ಮಿಲಿಟರಿ ಗುರಿಗಳ ಮೇಲಷ್ಟೇ ನಿಖರ ದಾಳಿ ಮಾಡಿವೆ

      • ಸೂರತ್‌ನಲ್ಲಿ ನಮ್ಮ ಅತ್ಯಾಧುನಿಕ ಎಸ್‌-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ಹಾಗೂ ವಾಯುನೆಲೆಗಳನ್ನು ನಾಶಪಡಿಸಿರುವುದಾಗಿ ದುರುದ್ದೇಶದಿಂದ ಸುಳ್ಳು ಮಾಹಿತಿ ಹರಡುತ್ತಿರುವ ಪಾಕಿಸ್ತಾನ

      • ಭಾರತೀಯ ಸಶಸ್ತ್ರ ಪಡೆಗಳು ಕಾರ್ಯಾಚರಣೆಗೆ ಸನ್ನದ್ಧವಾಗಿವೆ. ಈವರೆಗಿನ ಎಲ್ಲ ದಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲಾಗಿದೆ

      • ಪಾಕಿಸ್ತಾನದ ರಹೀಮ್ ಯಾರ್ ಖಾನ್‌ನಲ್ಲಿರುವ ಸೇನೆಯ ಆಸ್ತಿಗಳ ಮೇಲೆ ಭಾರತ ಗುರಿ ಇಟ್ಟಿದೆ

      • ಉದ್ವಿಗ್ನತೆ ಉಲ್ಬಣಗೊಳಿಸದಿರಲು ಬದ್ಧವಾಗಿರುವ ಭಾರತೀಯ ಸಶಸ್ತ್ರ ಪಡೆಗಳು ಪಾಕ್‌ ಪಡೆಗಳಿಗೆ ಪ್ರತ್ಯುತ್ತರ ನೀಡಿವೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries