ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ದಿಢೀರ್ ಭೇಟಿಯಾಗಿ ಪಹಲ್ಗಾಮ್ ಉಗ್ರ ದಾಳಿ ಬಗ್ಗೆ ಚರ್ಚಿಸಿದರು.
ಪ್ರಧಾನಿ ಅವರ ನವದೆಹಲಿ ನಿವಾಸಕ್ಕೆ ಭೇಟಿ ಮಾಡಿ ಕಳೆದ ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಪ್ರಧಾನಿ ನಿವಾಸದಲ್ಲಿ ಸುಮಾರು 30 ನಿಮಿಷಗಳ ಕಾಲ ಸಭೆ ನಡೆದಿದ್ದು, ಜಮ್ಮುವಿನ ಸದ್ಯದ ಪರಿಸ್ಥಿತಿ, ಭದ್ರತೆ ಬಗ್ಗೆ ಮೋದಿಯವರಿಗೆ ಅಬ್ದುಲ್ಲಾ ವಿವರಣೆ ನೀಡಿದರು. ಉಗ್ರರ ದಾಳಿ ಬಳಿಕ ಅಬ್ದುಲ್ಲಾ ಅವರು ಪ್ರಧಾನಿಯವರನ್ನು ಇದೇ ಮೊದಲ ಬಾರಿಗೆ ಭೇಟಿ ಮಾಡಿದರು.
ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಸಾವನ್ನಪ್ಪಿದ ಬಳಿಕ, ಜಮ್ಮುವಿನಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಅನೇಕ ಶಂಕಿತ ಉಗ್ರರ ಮನೆಗಳನ್ನೂ ಸೇನೆ ಧ್ವಂಸ ಮಾಡಿದೆ.




