ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ದಾಳಿ ಬಳಿಕ ಭಾರತೀಯ ಸೇನೆಯ ಉತ್ತರ ವಲಯದ ಕಮಾಂಡರ್ ಲೆ. ಜನರಲ್ ಎಂ.ವಿ.ಸುಚೀಂದ್ರ ಕುಮಾರ್ ಅವರನ್ನು ತೆಗೆದುಹಾಕಲಾಗಿದೆ ಎಂಬುದು ಸುಳ್ಳು. ಪಾಕಿಸ್ತಾನದ ಪರವಿರುವ ಕೆಲ ಸಾಮಾಜಿಕ ಜಾಲತಾಣ ಖಾತೆಗಳು ಈ ಸುಳ್ಳು ಸುದ್ದಿಯನ್ನು ಪಸರಿಸುತ್ತಿವೆ ಎಂದು ಸರ್ಕಾರ ಬುಧವಾರ ಹೇಳಿದೆ.
ಪಿಐಬಿ ಸತ್ಯಶೋಧನ (ಫ್ಯಾಕ್ಟ್‌ಚೆಕ್) ವಿಭಾಗವು ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. 'ಪಾಕಿಸ್ತಾನದ ಪರವಿರುವ ಕೆಲ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸುಚೀಂದ್ರ ಕುಮಾರ್ ಅವರನ್ನು ತೆಗೆದುಹಾಕಲಾಗಿದೆ ಎಂಬ ಸುಳ್ಳು ಸುದ್ದಿ ಪಸರಿಸಲಾಗಿದೆ. ವಾಸ್ತವದಲ್ಲಿ ಸುಚೀಂದ್ರ ಕುಮಾರ್ ಏ.30ರಂದು ನಿವೃತ್ತಿ ಹೊಂದಿದ್ದು, ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ ಅವರನ್ನು ಉತ್ತರ ವಲಯದ ಹೊಸ ಕಮಾಂಡರ್ ಆಗಿ ನೇಮಿಸಲಾಗುತ್ತದೆ' ಎಂದು ಸ್ಪಷ್ಟನೆ ನೀಡಿದೆ.
ಅಲ್ಲದೇ, ಸೇನೆಯ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿವೆ ಎಂದೂ ಕೆಲವು ಪತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ. ಅವು ನಕಲಿ ಎಂದು ಹೇಳಿದೆ.




