ಕಾಸರಗೋಡು: ವಿಶ್ವನಾಯಕ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ದಿನಾಂಕದಿಂದ ತೊಡಗಿ, ವಿವಿಧ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ "ಮೋದಿ ಫ್ಯಾನ್ಸ್ ಕಾಸರಗೋಡು" ವತಿಯಿಂದ ವಿಶೇಷ ಕಾರ್ತಿಕ ಪೂಜೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರುಗಿತು. ನರೇಂದ್ರಮೋದಿ ಅವರ ಹೆಸರಿನಲ್ಲಿ ಕಳೆದ 11 ವರ್ಷದಿಂದ ಪ್ರತಿ ತಿಂಗಳು ವಿಶೇಷ ಕಾರ್ತಿಕ ಪೂಜೆ ನಡೆಸಲಾಗುತ್ತಿದ್ದು ಕೇಂದ್ರದಲ್ಲಿ 11 ವರ್ಷ ಪೂರೈಸಿದ ಸಂದರ್ಭ ಸೋಮವಾರ ಶ್ರೀ ದೇವರಿಗೆ ವಿಶೇಷ ಕಾರ್ತಿಕ ಪೂಜೆ ಆಯೋಜಿಸಲಾಗಿತ್ತು.
ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಶಿವಶಂಕರ ಅಡಿಗ ಪೂಜೆ ನೆರವೇರಿಸಿದರು. ಜಯಶಂಕರ ಅಡಿಗ ಅವರು ಮೋದಿಜಿಯವರು ದೇಶ ಸೇವೆ ಮಾಡಲು ಇನ್ನಷ್ಟು ಶಕ್ತಿ ಶ್ರೀ ಮಲ್ಲಿಕಾರ್ಜುನ ದೇವರು ಕರುಣಿಸಲಿ ಎಂದು ವಿಶೇಷ ಪ್ರಾರ್ಥನೆ ಮಾಡಿದರು. ಈ ಸಂದರ್ಭ ಕಾಸರಗೋಡು ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್,ಮತ್ತು ಕಾರ್ಯದರ್ಶಿ ಸುನಿಲ್.ಪಿ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಕಾಸರಗೋಡು ನಗರ ಸಭಾ ಸದಸ್ಯರಾದ ಶ್ರೀಲತಾ ಟೀಚರ್, ವರಪ್ರಸಾದ್ ಕೋಟೆಕಣಿ, ಪಿ.ರಮೇಶ್, ಕಾಸರಗೋಡು ಬಿ.ಜೆ.ಪಿ.ನಗರ ಸಮಿತಿ ಅಧ್ಯಕ್ಷ ಪುರುಷೋತ್ತಮ, 'ನಮೋ ಫ್ಯಾನ್ಸ್' ಪ್ರಮುಖರಾದ ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ ಮುಂದಾಳು ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ರಮೆಶ್, ಸತೀಶ್, ಗುಣಪಾಲ ಅಮೈ, ಕಿಶೋರ್ ಕುಮಾರ್, ಕೆ.ಎನ್. ರಾಮಕೃಷ್ಣ ಹೊಳ್ಳ, ರವಿ ಕೇಸರಿ, ಶಂಕರನಾರಾಯಣ ಹೊಳ್ಳ, ನವೀನ್ ಬಟ್ಟಂಪಾರೆ, ತುಕರಾಮ ಆಚಾರ್ಯ ಕೆರೆಮನೆ, ಪ್ರಮೋದ್ ಕುಮಾರ್, ನಾಮದೇವ ಪೈ, ಸಾಯಿನಾಥ್ ರಾವ್, ಶಾರದ, ಸೌಮ್ಯ, ಸವಿತಾ, ಜೀತಾ, ಜಿತಿನ್, ಪ್ರೇಮಾ, ಗೀತಾ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ವೆಂಕಟರಮಣ ಬಾಲಗೋಕುಲದ ಮಕ್ಕಳಿಂದ ಭಜನೆ ನಡೆಯಿತು.


