ಕಾಸರಗೋಡು: ಕಳೆದ ಒಂದು ವಾರದ ದುರ್ಬಲಗೊಂಡಿದ್ದ ಮುಂಗಾರು ಬುಧವಾರದಿಂದ ಮತ್ತೆ ಚುರುಕುಪಡೆದುಕೊಂಡಿದೆ. ಕಾಸರಗೋಡು ಜಿಲ್ಲೆ ಒಳಗೊಂಡ ಮಲಬಾರ್ ಸೇರಿದಂತೆ ಕೇರಳಾದ್ಯಂತ ಬಿರುಸಿನ ಮಳೆಯಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.
ಕೇರಳದಲ್ಲಿ ಮುಂದಿನ ಏಳು ದಿ£ವಸಗಳ ಕಾಲ ಬಿರುಸಿನ ಮಳೆಯಾಗಲಿದ್ದು, 14ರಂದು ಕೇರಳ ತೀರದಲ್ಲಿ ಗಂಟೆಗೆ 50-60ಕೀ ಮೀ ವೇಗದಲ್ಲಿ ಕೂಡಿದ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ. ಜೂನ್ 12ರಿಂದ 15ರ ವರೆಗೆ ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಕಾಲಾವಧಿಯಲ್ಲಿ ರೆಡ್ ಅಲರ್ಟ್‍ಗೆ ಸಮಾನವಾದ ಮಳೆಯಾಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


