ಕೋಝಿಕೋಡ್: ಹೊಲದಿಂದ ಅಣಬೆ ಕೊಯ್ದು ಪದಾರ್ಥಮಾಡಿ ಸೇವಿಸಿದ್ದ ಆರು ಮಂದಿಗೆ ಆಹಾರ ವಿಷದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವವರಲ್ಲಿ 12 ಮತ್ತು 17 ವರ್ಷದ ಮಕ್ಕಳು ಸೇರಿದ್ದಾರೆ. ಅವರಲ್ಲಿ ಯಾರ ಸ್ಥಿತಿಯೂ ಗಂಭೀರವಾಗಿಲ್ಲ.
ಪೂನೂರಿನ ಅಬುಬಕರ್, ಶಬ್ನಾ, ಸೈದಾ, ಫಿರೋಜ್, ದಿಯಾ ಫೆಬಿನ್ ಮತ್ತು ಮೊಹಮ್ಮದ್ ರಜಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ತಮ್ಮ ಮನೆಯ ಸಮೀಪವಿರುವ ಹೊಲದಲ್ಲಿ ಕಂಡುಬಂದ ಅಣಬೆಗಳನ್ನು ಎರಡು ನೆರೆಕರೆ ಕುಟುಂಬಗಳು ಬೇಯಿಸಿ ಸೇವಿಸಿದ್ದವು.
ಅವರು ವಿಷಕಾರಿ ಅಣಬೆಗಳನ್ನು ಸೇವಿಸಿರಬೇಕು ಎಂದು ಅಂದಾಜಿಸಲಾಗಿದೆ. ನಂತರ, ಮಕ್ಕಳು ಸೇರಿದಂತೆ ಆರು ಜನರು ವಾಂತಿ ಮತ್ತು ದೈಹಿಕ ಅಸ್ವಸ್ಥತೆಯನ್ನು ಅನುಭವಿಸಿದರು. ಇದರೊಂದಿಗೆ, ಅವರನ್ನು ತಾಮರಸ್ಸೇರಿ ತಾಲ್ಲೂಕು ಆಸ್ಪತ್ರೆಗೆ ಮತ್ತು ನಂತರ ಕೋಝಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.






