ತಿರುವನಂತಪುರಂ: ಕೊಚ್ಚಿ ಕರಾವಳಿಯ ಅರೇಬಿಯನ್ ಸಮುದ್ರದಲ್ಲಿ ಮುಳುಗಡೆಗೊಂಡ ಸರಕು ಹಡಗಿನ ಕಂಟೇನರ್‍ಗಳಲ್ಲಿರುವ ವಸ್ತುಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಹಡಗಿನಲ್ಲಿರುವ 13 ಕಂಟೇನರ್‍ಗಳಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಇರುವುದಾಗಿ ಉಲ್ಲೇಖಿಸಲಾಗಿದೆ.
ಕ್ಯಾಲ್ಸಿಯಂ ಕಾರ್ಬೈಡ್ ನೀರಿನೊಂದಿಗೆ ಬೆರೆತಾಗ, ಅದು ಬೇಗನೆ ಸುಡುವ ಅಸಿಟಲೀನ್ ಅನಿಲವಾಗಿ ಬದಲಾಗುತ್ತದೆ. ಇವುಗಳಲ್ಲಿ ಎಂಟು ಹಡಗಿನೊಳಗೆ ಇವೆ. ಉಳಿದ ಕಂಟೇನರ್‍ಗಳನ್ನು ಹೊರಗೆ ಸಂಗ್ರಹಿಸಲಾಗಿದೆ.
ಗೋಡಂಬಿ ಎಂದು ಗುರುತಿಸಲಾದ ನಾಲ್ಕು ಕಂಟೇನರ್‍ಗಳಲ್ಲಿ ಗೋಡಂಬಿ ಇರುವುದು ಖಚಿತಗೊಂಡಿದೆ. 46 ಕಂಟೇನರ್‍ಗಳಲ್ಲಿ ತೆಂಗಿನಕಾಯಿ ಮತ್ತು ಗೋಡಂಬಿ ಇರುವುದಾಗಿ ಹೇಳಲಾಗಿದೆ. 87 ಕಂಟೇನರ್‍ಗಳಲ್ಲಿ ಮರಗಳಿವೆ.






