ಕಾಸರಗೋಡು: ಅಕ್ಷಯ ಜಿಲ್ಲಾ ಯೋಜನಾ ಕಚೇರಿ ಮತ್ತು ಜಿಲ್ಲಾ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ, ಜೂನ್ 14 ರಂದು ಬೆಳಿಗ್ಗೆ 10.30 ರಿಂದ ಸಂಜೆ 4 ರವರೆಗೆ ಜಿಲ್ಲೆಯ ಎಲ್ಲಾ ಅಕ್ಷಯ ಆಧಾರ್ ಕೇಂದ್ರಗಳಲ್ಲಿ ಮಕ್ಕಳಿಗಾಗಿ ಆಧಾರ್ ಶಿಬಿರವನ್ನು ಆಯೋಜಿಸಲಾಗುತ್ತಿದೆ.
ಐದರಿಂದ 15 ವರ್ಷದ ವರೆಗಿನ ಬಯೋಮೆಟ್ರಿಕ್ಸ್‍ನ್ನು ಕಡ್ಡಾಯವಾಗಿ ನವೀಕರಿಸಬೇಕು. ನವಜಾತ ಶಿಶುಗಳು ಆಧಾರ್‍ಗೆ ದಾಖಲಾಗಬಹುದಾಗಿದೆ. 5 ವರ್ಷದವರೆಗಿನ ಮಕ್ಕಳು ಆಧಾರ್ ನೋಂದಣಿಯ ಸಮಯದಲ್ಲಿ ತಮ್ಮ ಬಯೋಮೆಟ್ರಿಕ್ಸ್ (ಬೆರಳಚ್ಚು, ಕನ್ಣಿನ ಕೃಷ್ಣಮಣಿ) ಒದಗಿಸುವ ಅಗತ್ಯವಿಲ್ಲ. ಐದು ವರ್ಷದೊಳಗಿನ ಮಕ್ಕಳ ಕಡ್ಡಾಯ ಬಯೋಮೆಟ್ರಿಕ್ ನವೀಕರಣವನ್ನು ಏಳು ವರ್ಷದೊಳಗೆ, ಹದಿನೈದು ವರ್ಷದೊಳಗಿನ ಮಕ್ಕಳ ಕಡ್ಡಾಯ ಬಯೋಮೆಟ್ರಿಕ್ ನವೀಕರಣವನ್ನು ಹದಿನೇಳು ವರ್ಷದೊಳಗೆ ಮಾಡಿದರೆ ಮಾತ್ರ ಉಚಿತ ನವೀಕರಣ ಸೌಲಭ್ಯ ಲಭಿಸಲಿದೆ. ಇಲ್ಲದಿದ್ದಲ್ಲಿ ಈ ಸೇವೆಗೆ ನಿಗದಿತ ಶುಲ್ಕ ವಿಧಿಸಲಾಗುತ್ತದೆ. ಈ ಬಗ್ಗೆ ಶಾಲೆಗಳ ಮುಖ್ಯ ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡಬೇಕು ಎಂದು ಕಾಸರಗೋಡು ಜಿಲ್ಲಾ ಅಕ್ಷಯ ಯೋಜನಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.


