ಕಾಸರಗೋಡು: ಬದಿಯಡ್ಕ ಪಂಚಾಯಿತಿಯ ಉಕ್ಕಿನಡ್ಕದಲ್ಲಿ ನಿರ್ಮಾಣಹಂತದಲ್ಲಿರುವ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಪರಿಷ್ಕøತ ಅಂದಾಜಿಗೆ ಸರ್ಕಾರದಿಂದ ಅನುಮೋದನೆ ಲಭಿಸಿದೆ.
ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾಮಗಾರಿಗಾಗಿ ಸರ್ಕಾರವು 49,75,67,640.27 ರೂ.ಗಳ ಪರಿಷ್ಕೃತ ಅಂದಾಜು ಮೊತ್ತವನ್ನು ಅನುಮೋದಿಸಿದ್ದು, ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ ಕೆಐಟಿಸಿಓ(ಕಿಟ್ಕೋ)ಸಲ್ಲಿಸಿರುವ ಪರಿಷ್ಕøತ ಅಂದಾಜನ್ನು ತಾಂತ್ರಿಕ ಸಮಿತಿಯ ಶಿಫಾರಸಿನೊಂದಿಗೆ ಸರ್ಕಾರ ಅನುಮೋದಿಸಿದೆ.

.jpeg)

