HEALTH TIPS

ಛತ್ತೀಸಗಢ: 16 ನಕ್ಸಲರ ಶರಣಾಗತಿ

ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ 16 ನಕ್ಸಲರು ಸೋಮವಾರ ಪೊಲೀಸರಿಗೆ ಶರಣಾಗಿದ್ದಾರೆ. 

ಶರಣಾಗತಿ ಹೊಂದಿದ ನಕ್ಸಲರಲ್ಲಿ 6 ಮಂದಿಯ ಸುಳಿವು ಕೊಟ್ಟವರಿಗೆ ಒಟ್ಟು 25 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಒಂಬತ್ತು ನಕ್ಸಲರು ಕೆರ್ಲಪೆಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, ಅವರ ಶರಣಾಗತಿಯ ಮೂಲಕ ಗ್ರಾಮವು ನಕ್ಸಲ್ ಮುಕ್ತವಾಗಿದೆ.

ಸರ್ಕಾರದ ₹1 ಕೋಟಿ ಅನುದಾನ ಪಡೆಯಲು ಅರ್ಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲ್‌ ಸಿದ್ಧಾಂತ ಮತ್ತು ಹಿಂಸಾಚಾರಗಳಿಂದ ಬೇಸತ್ತು ಹಾಗೂ ಸರ್ಕಾರದ ಯೋಜನೆಗಳಿಂದ ಮನಪರಿವರ್ತನೆಗೊಂಡು 16 ಮಂದಿ ಶರಣಾಗಿದ್ದಾರೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries