ಕಾಸರಗೋಡು: ಚೆರುವತ್ತೂರು ಪಂಚಾಯಿತಿ ತುರುತ್ತಿ ಗ್ರಾಮ ವ್ಯಾಪ್ತಿಯ ಕುಳಂಗಾಡ್ ಗುಡ್ಡ ಪ್ರದೇಶದಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದ್ದು, ಈ ಪ್ರದೇಶದ ಕಾಲನಿ ನಿವಾಸಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.
ಗುಡ್ಡ ಪ್ರದೇಶದಲ್ಲಿ ಆಳ ಹಾಗೂ ಅತೀ ಉದ್ದದ ಬಿರಕು ಕಾಣಿಸಿಕೊಮಡಿದ್ದು, ಬಿರುಸಿನ ಮಳೆಗೆ ಇದರೊಳಗೆ ನೀರು ಸಏರ್ಪಡೆಯಾದಲ್ಲಿ ಭಾರೀ ಪ್ರಮಾಣದ ಭೂಕುಸಿತಕ್ಕೆ ಕಾರಣವಾಗುವ ಭೀತಿ ಎದುರಾಗಿದೆ. ಈ ಪ್ರದೇಶದ ಕಾಲನಿಯ 17ಕುಟುಂಬಗಳನ್ನು ಕಡಂಗೋಡ್‍ನಲ್ಲಿರುವ ಜಿಎಫ್‍ಪಿಎಚ್ ಶಾಲೆಯ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
ಭೂಮಿಯಲ್ಲಿ ಬಿರುಕು ಕಾಣಿಸಿಕೊಮಡಿರುವ ಪ್ರದೇಶಕ್ಕೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಅವಲೋಕನ ನಡೆಸಿತು. ಭೂಕುಸಿತ ಸಾಧ್ಯತೆಯಿರುವ ಪ್ರದೇಶದಿಂದ ತೆರವುಗೊಳ್ಳು ಹಿಂದೇಟುಹಾಕುವ ಕುಟುಂಬಗಳನ್ನು ಕಟ್ಟುನಿಟ್ಟಾಗಿ ಸ್ಥಳಾಂತರಿಸಲು ಮತ್ತು ಈ ಪ್ರದೇಶಕ್ಕೆ ಸಾರ್ವಜನಿಕರು ಭೇಟಿ ನೀಡುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಜಿಲ್ಲಾಧಿಖಾರಿಗೆ ವರದಿ ಸಲ್ಲಿಸಲಿದ್ದಾರೆ. ಬಿರುಕು ಕಾಣಿಸಿಕೊಮಡಿರುವ ಕುಳಂಗಾಡ್ ಬೆಟ್ಟದಲ್ಲಿ ನೀರು ನಿಲ್ಲುವುದನ್ನು ತಪ್ಪಿಸಲು ಒಳಚರಂಡಿ ನಿರ್ಮಿಸುವುದರ ಜತೆಗೆ ಇತರ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಭೂಮಿಯಾಗಿರುವುದರಿಂದ ಪಂಚಾಯಿತಿ ಮತ್ತು ಅರಣ್ಯ ಇಲಾಖೆಗೆ ಈ ಬಗ್ಗೆ ಸೂಚನೆಗಳನ್ನು ನೀಡಲಾಯಿತು. ಶಾಸಕ ಎಂ. ರಾಜಗೋಪಾಲನ್, ಚೆರುವತ್ತೂರು ಗ್ರಾಪಂ ಅಧ್ಯಕ್ಷೆ ಸಿ.ವಿ. ಪ್ರಮೀಳಾ ಮತ್ತು ಇತರರು ಸ್ಥಳಕ್ಕೆ ಭೇಟಿ ನೀಡಿದರು. ಹೊಸದುರ್ಗ ತಹಶೀಲ್ದಾರ್, ಉಪ ತಹಶೀಲ್ದಾರ್, ಪಮಚಾಯಿತಿ ಕಾರ್ಯದರ್ಶಿ, ಅರಣ್ಯ, ಪೆÇಲೀಸ್, ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಜತೆಗಿದ್ದರು.


