ಕಾಸರಗೋಡು : ಭಾರತೀಯ ವಕೀಲರ ಪರಿಷತ್(ಬಿಎಪಿ)ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಯಿತು. ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ವಕೀಲರ ಪರಿಷತ್ ರಾಜ್ಯ ಸಮಿತಿ ಕಾರ್ಯದರ್ಶಿ, ವಕೀಲ ಪಿ.ಪಿ. ಸಂದೀಪ್ ಕುಮಾರ್ ಅಭಿಯಾನವನ್ನು ಉದ್ಘಾಟಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ವಕೀಲ ಎ.ಸಿ.ಅಶೋಕ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ವಕೀಲರ ಪರಿಷತ್ ರಾಜ್ಯ ಸಮಿತಿ ಉಪಾಧ್ಯಕ್ಷ ಬಿ.ರವೀಂದ್ರನ್, ಕೆ.ಕರುಣಾಕರನ್ ನಂಬಿಯಾರ್, ಕೆ.ಜಿ. ಅನಿಲ್, ಎಂ.ಕುಸುಮಾ, ಸಚಿನ್ ಶೆಣೈ, ಕೆ.ಎಂ. ಬೀನಾ, ಭರತ್‍ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು. ಭಾರತೀಯ ವಕೀಲರ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಕೀಲಕೆ.ಜೆ. ನವೀನ್‍ರಾಜ್ ಸ್ವಾಗತಿಸಿದರು.

