HEALTH TIPS

ಕೀನ್ಯಾದಲ್ಲಿ ಘೋರ ಘಟನೆ: ಭೀಕರ ಅಪಘಾತದಲ್ಲಿ 18 ತಿಂಗಳ ಮಗು ಸೇರಿ ಕೇರಳ ಮೂಲದ ಐವರ ದುರ್ಮರಣ!

ಕೊಚ್ಚಿ: ಕೀನ್ಯಾದಲ್ಲಿ ಪ್ರಯಾಣಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಆರು ಭಾರತೀಯರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಕತಾರ್ ನಲ್ಲಿ ನೆಲೆಸಿದ್ದ ಭಾರತೀಯ ಮೂಲದವರು ಎಂದು ಗುರುತಿಸಲಾಗಿದ್ದು ಐವರು ಕೇರಳಿಗರು ಎಂದು ತಿಳಿದುಬಂದಿದೆ. 

ಮೃತರಾದ ಮಲಯಾಳಿಗಳಾದ ಮಾವೆಲಿಕ್ಕರ ಮೂಲದ ಗೀತಾ ಶೋಜಿ ಐಸಾಕ್ (58), ಜಸ್ನಾ ಕುಟ್ಟಿಕ್ಕಟ್ಟುಚಲಿಲ್ (29), ರುಹಿ ಮೆಹ್ರಿ ಮೊಹಮ್ಮದ್ (18 ತಿಂಗಳ), ಒಟ್ಟಪಾಲಂ ಮೂಲದ ರಿಯಾ ಎನ್ (41) ಮತ್ತು ಟೈರಾ ರೊಡ್ರಿಗಸ್ (8) ಎಂದು ಗುರುತಿಸಲಾಗಿದೆ.

ಆದರೆ ಮತೋರ್ವನ ಗುರುತು ಪತ್ತೆಯಾಗಿಲ್ಲ.

ನ್ಯಾಂಡರುವಾ ಕೌಂಟಿಯ ಓಲ್ ಜೊರೊರೊಕ್-ನಕುರು ರಸ್ತೆಯಲ್ಲಿರುವ ಗಿಚಾಕಾದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 27 ಮಂದಿ ಗಾಯಗೊಂಡಿದ್ದಾರೆ. ಪ್ರವಾಸಿಗರು ನ್ಯಾಹುರುರುವಿನ ಪನಾರಿ ರೆಸಾರ್ಟ್‌ಗೆ ತೆರಳುತ್ತಿದ್ದಾಗ ಅವರ ಬಸ್ ಕಂದಕಕ್ಕೆ ಬಿದ್ದಿತು. ಕಡಿದಾದ ಇಳಿಜಾರಿನ ಪ್ರದೇಶದಲ್ಲಿ ತಿರುವು ಪಡೆಯಲು ಯತ್ನಿಸಿದಾಗ ಚಾಲಕ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ಬಸ್ ನಲ್ಲಿ 28 ಪ್ರವಾಸಿಗರು, ಮೂವರು ಸ್ಥಳೀಯ ಮಾರ್ಗದರ್ಶಕರು ಮತ್ತು ಚಾಲಕನನ್ನು ಹೊತ್ತೊಯ್ಯುತ್ತಿತ್ತು.

ನೈರೋಬಿಯಲ್ಲಿರುವ ಭಾರತೀಯ ಹೈಕಮಿಷನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು. ಮೃತರ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಹೈಕಮಿಷನ್‌ನ ಅಧಿಕಾರಿಗಳ ತಂಡವು ಸ್ಥಳದಲ್ಲಿದ್ದು, ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ. ನಮ್ಮನ್ನು +254 734916532 ನಲ್ಲಿ ಸಂಪರ್ಕಿಸಬಹುದು ಎಂದು ಹೈಕಮಿಷನ್ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries