ಕೀವ್: ಉಕ್ರೇನ್ ಮೇಲೆ ಶನಿವಾರ ರಷ್ಯಾ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ 9 ವರ್ಷದ ಬಾಲಕಿ ಸೇರಿದಂತೆ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದ ಪಡೆಗಳು ಶುಕ್ರವಾರ ಮಧ್ಯರಾತ್ರಿಯಿಂದ ಉಕ್ರೇನ್‌ನಾದ್ಯಂತ ಸುಮಾರು 109 ಡ್ರೋನ್ ಮತ್ತು ಐದು ಕ್ಷಿಪಣಿಗಳನ್ನು ಉಡಾಯಿಸಿವೆ.
ಅದರಲ್ಲಿ ಮೂರು ಕ್ಷಿಪಣಿಗಳು ಮತ್ತು 42 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದ್ದು, ಇತರ 30 ಡ್ರೋನ್‌ಗಳು ನಿಗದಿತ ಗುರಿ ತಲುಪಲು ವಿಫಲವಾಗಿವೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.
ದಾಳಿಯಿಂದ 16 ವರ್ಷದ ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ. ಮನೆಗಳು, ಕಾರುಗಳು ಮತ್ತು ಕಟ್ಟಡಗಳು ನಾಶವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿ ಕುರಿತು ರಷ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.




