ತಿರುವನಂತಪುರಂ: ಮಾನವ ವಸಾಹತುಗಳಿಗೆ ಪ್ರವೇಶಿಸುವ ಕಾಡುಹಂದಿಗಳನ್ನು ಗುಂಡಿಕ್ಕಿ ಕೊಲ್ಲಲು ಮೇ 2020 ರಲ್ಲಿ ಆದೇಶ ಹೊರಡಿಸಿದಾಗಿನಿಂದ ರಾಜ್ಯದಲ್ಲಿ 4663 ಕಾಡುಹಂದಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಅರಣ್ಯ ಸಚಿವ ಎ ಕೆ ಶಶೀಂದ್ರನ್ ವಿಧಾನಸಭೆಯ ಪ್ರಶ್ನೆಗೆ ತಮ್ಮ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಉತ್ತರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳು ಈ ಅಧಿಕಾರವನ್ನು ಹೆಚ್ಚು ಬಳಸಿಕೊಂಡಿವೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಮಲಪ್ಪುರಂನ ವಂಡೂರ್ ಕ್ಷೇತ್ರದಲ್ಲಿ ಅತಿ ಹೆಚ್ಚು ಕಾಡುಹಂದಿಗಳನ್ನು ಕೊಲ್ಲಲಾಗಿದೆ: 383 ಹಂದಿ ಹನನಗೈಯ್ಯಲಾಗಿದೆ. ವಿಧಾನಸಭಾ ಚುನಾವಣೆ ನಡೆಯುತ್ತಿರುವ ನಿಲಂಬೂರಿನಲ್ಲಿ 213 ಹಂದಿಗಳು ಮತ್ತು ನೆನ್ಮಾರದಲ್ಲಿ 333 ಹಂದಿಗಳನ್ನು ಕೊಲ್ಲಲಾಗಿದೆ. ಕ್ಷೇತ್ರವಾರು ಅಂಕಿಅಂಶಗಳು ಇಂತಿವೆ: ಮನ್ನಾಕ್ರ್ಕಾಡ್ 185, ಕೊಂಗಾಡ್ 141, ಪಾಲಕ್ಕಾಡ್ 186, ಪಟ್ಟಾಂಬಿ 269, ತಿರುವಂಬಾಡಿ 217, ವಾಮನಪುರಂ 254, ಪುನಲೂರು 17, ಚೇಳಕ್ಕರ 236. ರಾಜ್ಯದಲ್ಲಿ 420 ಮಾನ್ಯತೆ ಪಡೆದ ಶೂಟರ್‍ಗಳಿದ್ದಾರೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.


