HEALTH TIPS

2025ರ ವೇಳೆಗೆ 133 ವಾಣಿಜ್ಯ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ ಭಾರತದ ವಿಮಾನಯಾನ ಸಂಸ್ಥೆಗಳು : ವರದಿ

ನವದೆಹಲಿ: 2025ರ ವೇಳೆಗೆ ಭಾರತದ ವಾಣಿಜ್ಯ ವಿಮಾನಗಳ 16% ಅಂದರೆ ಸುಮಾರು 133 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ನೀತಿ ಆಯೋಗದ ವರದಿಯು ತಿಳಿಸಿದೆ. ವಿಮಾನ ತಂತ್ರಜ್ಞ ಅಭಿರಾಮ್ ಸಿಂಗ್, ಭಾರತದಲ್ಲಿ ವಿಮಾನಗಳ ಕಳಪೆ ನಿರ್ವಹಣೆ ಬಗ್ಗೆ ಹೇಳಿಕೊಂಡಿದ್ದಾರೆ.

ಅಭಿರಾಮ್ ಸಿಂಗ್ ಭಾರತವನ್ನು ತೊರೆದು ದುಬೈ ಎಮಿರೇಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ದೀರ್ಘಾವಧಿ ಕೆಲಸ, ಕಡಿಮೆ ವೇತನ, ಕಳಪೆ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ. ಭಾರತ ಮತ್ತು ದುಬೈನಲ್ಲಿ ವಿಮಾನ ನಿರ್ವಹಣೆ ಕುರಿತಂತೆ ರಾತ್ರಿ ಮತ್ತು ಹಗಲಿನಷ್ಟು ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.

2025ರ ಮಾರ್ಚ್ ವೇಳೆಗೆ ಭಾರತದ ವಾಣಿಜ್ಯ ವಿಮಾನಗಳ 16% ಅಂದರೆ ಸುಮಾರು 133 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ನೀತಿ ಆಯೋಗದ ಇತ್ತೀಚಿನ ವರದಿಯು ತಿಳಿಸಿದೆ

2024ರಲ್ಲಿ ದೋಷಪೂರಿತ ಎಂಜಿನ್‌ಗಳಿಂದಾಗಿ ʼಗೋ ಏರ್‌ಲೈನ್ಸ್‌ʼ ಅರ್ಧದಷ್ಟು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ಇದು ಗೋ ಏರ್‌ಲೈನ್ಸ್‌ಗೆ ದೊಡ್ಡ ಹೊಡೆತವನ್ನುಂಟುಮಾಡಿತ್ತು. 2025ರ ಜನವರಿ 30ರ ವೇಳೆಗೆ ಎಂಜಿನ್ ಸಮಸ್ಯೆಗಳಿಂದಾಗಿ 60 ರಿಂದ 70 ಇಂಡಿಗೋ ಜೆಟ್‌ಗಳ ಹಾರಾಟ ಸ್ಥಗಿತಗೊಳಿಸಲಾಗಿದೆ.

ನೀತಿ ಆಯೋಗದ ʼನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ (Maintenance, Repair and Overhaul) ʼ(MRO) ವರದಿಯ ಪ್ರಕಾರ, ಸಪ್ಲೈ ಚೈನ್ ಸಮಸ್ಯೆ, ಎಂಜಿನ್ ವೈಫಲ್ಯ ಸಮಸ್ಯೆ ಭಾರತದ ವಿಮಾನಯಾನ ಉದ್ಯಮಕ್ಕೆ ದೊಡ್ಡ ಅಡೆತಡೆಯನ್ನುಂಟು ಮಾಡುತ್ತಿದೆ.

ಈ ನ್ಯೂನತೆಗಳ ಹೊರತಾಗಿಯೂ, ಭಾರತವು ದೇಶದಲ್ಲಿ MRO ಕಡೆಗೆ ಬಹಳ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದೆ. ಅಮೆರಿಕ ಮತ್ತು ಚೀನಾ ನಂತರ ಭಾರತವು ವಿಶ್ವದ ಮೂರನೇ ಅತಿದೊಡ್ಡ ವಾಣಿಜ್ಯ ವಿಮಾನ ಖರೀದಿದಾರನಾಗಲಿದೆ.

ಭಾರತವು 2040ರ ವೇಳೆಗೆ MROಗಳಿಗೆ ಜಾಗತಿಕ ಕೇಂದ್ರವಾಗಲು ಮತ್ತು ಎಲ್ಲಾ ಭಾರತೀಯ MRO ಅವಶ್ಯಕತೆಗಳಲ್ಲಿ 90 ಪ್ರತಿಶತವನ್ನು ಪೂರೈಸಲು ಶ್ರಮಿಸುತ್ತಿದೆ.

ನೀತಿ ಆಯೋಗವು ಭಾರತೀಯ MRO ಉದ್ಯಮವು 2021ರಲ್ಲಿ 1.7 ಬಿಲಿಯನ್‌ನಿಂದ 2031ರ ವೇಳೆಗೆ 4 ಬಿಲಿಯನ್‌ಗೆ ಹೆಚ್ಚಳವಾಗಲಿದೆ ಎಂದು ಯೋಜಿಸಿದೆ. ಇದರ ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರವು 8.9% ಆಗಿದೆ.

ನೀತಿ ಆಯೋಗದ ವರದಿಯ ಪ್ರಕಾರ, ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್, ಮ್ಯಾಕ್ಸ್ MRO ಪ್ರೈವೇಟ್ ಲಿಮಿಟೆಡ್, ಏರ್ ವರ್ಕ್ಸ್ ಇಂಡಿಯಾ (ಎಂಜಿನಿಯರಿಂಗ್) ಪ್ರೈವೇಟ್ ಲಿಮಿಟೆಡ್, ತಾಜ್ ಏರ್, ಡೆಕ್ಕನ್ ಚಾರ್ಟರ್ಸ್ ಲಿಮಿಟೆಡ್, ಬರ್ಡ್ ಎಕ್ಸಿಕ್ಯುಜೆಟ್, ಇಂಡಮರ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಮತ್ತು GMR ಏರೋ ಟೆಕ್ನಿಕ್ ಲಿಮಿಟೆಡ್ ಭಾರತದ ಪ್ರಮುಖ MRO ಕಂಪೆನಿಗಳು.

ವರದಿಯ ಪ್ರಕಾರ, ಭಾರತೀಯ ವಿಮಾನಯಾನ ಸಂಸ್ಥೆಗಳು ತಮ್ಮ ಆದಾಯದ 12 ರಿಂದ15% ಹಣವನ್ನು ವಿಮಾನ ನಿರ್ವಹಣೆಗೆ ಖರ್ಚು ಮಾಡುತ್ತವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries