ಅದೆಷ್ಟು ಬ್ಯಾಟರ್ ಗಳು ಈ ರೀತಿಯ ರೋಚಕ ಕ್ಯಾಚ್ ಗಳಿಗೆ ಔಟಾಗಿದ್ದಾರೆ, ಪೆವಿಲಿಯನ್ ಗೆ ಸೇರಿದ ನಂತರ ತಾವು ಬಾರಿಸಿದ ಕ್ಯಾಚ್ ಬಗ್ಗೆ ಬೇಸರ ಪಟ್ಟುಕೊಂಡಿರುತ್ತಾರೆ, ಆದರೆ, ಕ್ರಿಕೆಟ್ ಫ್ಯಾನ್ಸ್ ಮಾತ್ರ ಈ ಅದ್ಬುತ ಕ್ಯಾಚ್ ನಿಂದ ಖುಷಿಪಟ್ಟು, ಈ ಕ್ಯಾಚ್ ನಿಂದಲೇ ಪಂದ್ಯದ ಸ್ಥಿತಿ ಬದಲಾಗಿದೆ ಎಂದು ಮಾತನಾಡುತ್ತಿರುವ ಕ್ಷಣ ಇನ್ನು ಮುಂದೆ ಇರುವುದಿಲ್ಲ. ಏಕೆಂದರೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)(ICC) ಕ್ರಿಕೆಟ್ ನಿಯಮದಲ್ಲಿ ಕೆಲವು ಬದಲಾವಣೆಗೆ ಮುಂದಾಗಿದೆ.
ಹೊಸ ನಿಯಮದ ಪ್ರಕಾರ ಪೀಲ್ಡರ್ ಗಳು ಬೌಂಡರಿ ಹಗ್ಗದಿಂದ ಹೊರಗಿನಿಂದ ಚೆಂಡನ್ನು ಬೌನ್ಸ್ ಮಾಡುವ ಮೂಲಕ ಮತ್ತು ಅದನ್ನು ಹಲವು ಬಾರಿ ಸ್ಪರ್ಶಿಸುವ ಮೂಲಕ ಕ್ಯಾಚ್ ಹಿಡಿಯುವುದನ್ನು ಮುಂಬರುವ ಅಕ್ಟೋಬರ್ 2026 ರಿಂದ ಬದಲಾವಣೆಯಾಗಲಿದೆ, ಅದು ಎಂಸಿಸಿ ನಿಯಮದಲ್ಲಿಯೂ ಸೇರಿಸಲು ಐಸಿಸಿ ಮುಂದಾಗಿದೆ.
ಹೊಸ ನಿಯಮದಲ್ಲಿ ಏನಿದೆ ?
ಬೌಂಡರಿಯ ಹೊರಗೆ ಗಾಳಿಯಲ್ಲಿರುವ ಫೀಲ್ಡರ್ ಒಮ್ಮೆ ಮಾತ್ರ ಚೆಂಡನ್ನು ಮುಟ್ಟಬಹುದು.
ಕ್ಯಾಚ್ ಮಾನ್ಯವೆಂದು ಪರಿಗಣಿಸಲು ಫೀಲ್ಡರ್ ಚೆಂಡಿನೊಂದಿಗೆ ಮೈದಾನಕ್ಕೆ ಹಿಂತಿರುಗಬೇಕು.
ಬನ್ನಿಹಾಪ್ ತಂತ್ರವು ಇನ್ನು ಮುಂದೆ ಕಾನೂನು ಬದ್ದವಾಗಿರುವುದಿಲ್ಲ.
ಇದಕ್ಕೆ ಕಾರಣ ಏನು ?
ಬಿಗ್ ಬ್ಯಾಷ್ ಲೀಗ್ ನಲ್ಲಿನ ವಿವಾದಾತ್ಮಕ ಕ್ಯಾಚ್ ಇವೆಲ್ಲಾ ನಿಯಮ ಬದಲಾವಣೆಗೆ ಕಾರಣವಾಗಿದೆ. ಬ್ರಿಸ್ಟೇನ್ ಹೀಟ್ ನ ಮೈಕಲ್ ನೆಸರ್, ಸಿಡ್ನಿ ಸಿಕ್ಸರ್ಸ್ ಜೋರ್ಡಾನ್ ಸಿಲ್ಕ್ ಲಾಂಗ್ ಆಫ್ ಬಳಿ ಹೊಡೆದ ಎಸೆತವನ್ನು ಹಿಡಿಯಲು ಪ್ರಯತ್ನಿಸಿದರು. ನೆಸರ್ ಎರಡೂ ಕೈಗಳಿಂದ ಚೆಂಡನ್ನು ಹಿಡಿದರು. ಆದರೆ ಅವರು ಸಮತೋಲನ ಕಳೆದುಕೊಂಡು ಬೌಂಡರಿಯ ಹೊರಗೆ ಹೋದರು.
ನಂತರ ಅವರು ನೆಸರ್ ಚೆಂಡನ್ನು ಗಾಳಿಯಲ್ಲಿ ಚೆಂಡನ್ನು ಎಸೆದು ಬೌಂಡರಿಯ ಹೊರಗೆ ನೆಲದ ಮೇಲೆ ತನ್ನ ಪಾದಗಳನ್ನು ಇರಿಸಿ ಮತ್ತೆ ಹಾರಿ ಚೆಂಡನ್ನು ಎಸೆದು ಬೌಂಡರಿ ಒಳಗೆ ಬಂದು ಅಂತಿಮವಾಗಿ ಕ್ಯಾಚ್ ಅನ್ನು ಪೂರ್ಣಗೊಳಿಸಿದ್ದರು. ಈ ಸಂದರ್ಭದಲ್ಲಿ ಅಂಪೈರ್ ಸಿಲ್ಕ್ ಔಟ್ ಎಂದು ಘೋಷಿಸಿದರು. ಅವರು ಆಶ್ಚರ್ಯದಿಂದ ಮೈದಾನದಿಂದ ಹೊರಗೆ ನಡೆದರು.
ಪ್ರಪಂಚದಾದ್ಯಂತ ಇಂತಹ ಕ್ಯಾಚ್ ಗಳು ಸರ್ವೇ ಸಾಮಾನ್ಯವಾಗಿದ್ದವು. ಆದರೆ, ಬ್ಯಾಟರ್ ಸಿಲ್ಕ್ ಅವರ ಔಟ್ ನೀಡಿವುದರ ಬಗ್ಗೆ ವ್ಯಾಪಕ ಚರ್ಚೆ ನಡೆದವು. ನಿಮಯಗಳ ಬದಲಾವಣೆಗೆ ಸಾಕಷ್ಟು ಒತ್ತಡಗಳು ಬಂದವ. ಈ ಹಿನ್ನೆಲೆಯಲ್ಲಿ ಐಸಿಸಿ ನಿಮಯಗಳ ಪರಿಷ್ಕರಣೆಗೆ ಮುಂದಾಗಿದೆ.
ಆದ್ದರಿಂದ ಇನ್ನು ಮುಂದೆ ಬಹುಸ್ವರ್ಶದ ಬೌಂಡರಿ ಗೆರೆಯ ಕ್ಯಾಚ್ ಗಳು ಮಾನ್ಯವಿಲ್ಲ. ಬ್ಯಾಟರ್ ಸೇಫ್ ಆಗಲಿದ್ದಾರೆ. ಆದರೆ, ಪ್ರೇಕ್ಷಕರು ಮಾತ್ರ ರೋಚಕ ಕ್ಯಾಚ್ ನ ಕ್ಷಣಗಳನ್ನು ಮಾತ್ರ ಮಿಸ್ ಮಾಡಿಕೊಳ್ಳಲಿದ್ದಾರೆ.




