HEALTH TIPS

2025-26ರಲ್ಲಿ ಜಿಡಿಪಿ ಶೇ. 6.5, ಹಣದುಬ್ಬರ ಶೇ. 3.7: ಆರ್​​ಬಿಐ ಅಂದಾಜು

ನವದೆಹಲಿ, ಜೂನ್ 6: ರಿಪೋ ದರವನ್ನು 50 ಮೂಲಾಂಕಗಳಷ್ಟು ಭರ್ಜರಿ ಕಡಿತ ಮಾಡಿರುವ ಆರ್​​ಬಿಐ (RBI MPC meeting) ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಆಶಾದಾಯಕವಾಗಿದೆ. ಜಾಗತಿಕವಾಗಿ ಬಹಳ ಅನಿಶ್ಚಿತ ಸ್ಥಿತಿ ಇರುವುದರಿಂದ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಮುನ್ನೆಚ್ಚರಿಕೆಯಾಗಿ ರಿಪೋ ದರವನ್ನು ಆರ್​​ಬಿಐ ಇಳಿಸಿದೆ.

ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು ಎಂದು ಹಿಂದಿನ ಎಂಪಿಸಿ ಸಭೆಯಲ್ಲಿ ಮಾಡಿದ್ದ ಅಂದಾಜನ್ನೇ ಆರ್​​ಬಿಐ ಪುನರುಚ್ಚರಿಸಿದೆ.

ವಾರ್ಷಿಕ ಹಣದುಬ್ಬರ ದರ ಮಾತ್ರವಲ್ಲ, ತ್ರೈಮಾಸಿಕ ಜಿಡಿಪಿ ದರಗಳ ಬಗೆಗಿನ ಆರ್​​ಬಿಐ ಅಂದಾಜಿನಲ್ಲಿ ಬದಲಾವಣೆ ಆಗಿಲ್ಲ. 2025-26ಕ್ಕೆ ಜಿಡಿಪಿ ವೃದ್ಧಿ ಎಷ್ಟಿರಬಹುದು ಎಂದು ಆರ್​​ಬಿಐ ಮಾಡಿರುವ ಅಂದಾಜು ಈ ಕೆಳಕಂಡಂತಿದೆ:

2025-26ಕ್ಕೆ ಒಟ್ಟಾರೆ ಜಿಡಿಪಿ ದರ: ಶೇ. 6.5

  • ಮೊದಲ ಕ್ವಾರ್ಟರ್: ಶೇ. 6.5
  • ಎರಡನೇ ಕ್ವಾರ್ಟರ್: ಶೇ. 6.7
  • ಮೂರನೇ ಕ್ವಾರ್ಟರ್: ಶೇ. 6.6
  • ನಾಲ್ಕನೇ ಕ್ವಾರ್ಟರ್: ಶೇ. 6.3

ಹಣದುಬ್ಬರ ಇಳಿಕೆ ಬಗ್ಗೆ ಆರ್​​ಬಿಐ ಉತ್ಸಾಹ

ಹಣದುಬ್ಬರದ ಬಗ್ಗೆ ರಿಸರ್ವ್ ಬ್ಯಾಂಕ್ ಬಹಳ ವಿಶ್ವಾಸದಲ್ಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇ. 3.7ರಷ್ಟಿರಬಹುದು ಎಂದು ಅಂದಾಜು ಮಾಡಿದೆ. ಹಿಂದಿನ ಸಭೆಯಲ್ಲಿ ಅದು ಹಣದುಬ್ಬರ ಶೇ. 4ರಷ್ಟಿರಬಹುದು ಎಂದು ಅಭಿಪ್ರಾಯಪಟ್ಟಿತ್ತು. ಈ ಬಾರಿ ಮುಂಗಾರು ಮಳೆ ಬೆಳೆ ಉತ್ತಮವಾಗಿ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಪ್ರಮಾಣ ತಗ್ಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಆರ್​​ಬಿಐ ಹಣದುಬ್ಬರ ಕಡಿಮೆ ಆಗಬಹುದು ಎಂದು ಹೇಳಿದೆ.

2025-26ಕ್ಕೆ ಹಣದುಬ್ಬದ ಬಗ್ಗೆ ಆರ್​​ಬಿಐ ಅಂದಾಜು

ಇಡೀ ವರ್ಷಕ್ಕೆ: ಶೇ. 3.7

  • ಮೊದಲ ಕ್ವಾರ್ಟರ್: ಶೇ. 2.9
  • ಎರಡನೇ ಕ್ವಾರ್ಟರ್: ಶೇ. 3.4
  • ಮೂರನೇ ಕ್ವಾರ್ಟರ್: ಶೇ. 3.9
  • ನಾಲ್ಕನೇ ಕ್ವಾರ್ಟರ್: ಶೇ. 4.4

ಆರ್​​ಬಿಐ ಅಂದಾಜು ಮಾಡಿರುವಂತೆ ಹಣದುಬ್ಬರವು ಶೇ. 3.7ಕ್ಕೆ ಮಿತಿಗೊಂಡರೆ ಅದು ಗಮನಾರ್ಹ ಸಾಧನೆ ಎನಿಸಲಿದೆ. ಕೋವಿಡ್ ಬಳಿಕ ಹಣದುಬ್ಬರವು ಶೇ. 7ಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ಹೋಗಿತ್ತು. ಆರ್​​ಬಿಐ ಹಣದುಬ್ಬರವನ್ನು ಶೇ. 4ಕ್ಕೆ ಇಳಿಸುವ ಟಾರ್ಗೆಟ್ ಇಟ್ಟಿತ್ತು. ಹಣದುಬ್ಬರದ ತಾಳಿಕೆ ಮಿತಿಯಾಗಿ ಶೇ. 2ರಿಂದ 6 ಎಂದು ನಿಗದಿ ಮಾಡಿದೆ. ಹಣದುಬ್ಬರವು ಈ ತಾಳಿಕೆ ಮಿತಿಯೊಳಗೇ ಇರುವುದು ಆರ್​​ಬಿಐನ ಮುಖ್ಯ ಗುರಿಯಾಗಿದೆ.

ಈಗ್ಗೆ ಹಲವು ತಿಂಗಳಿಂದ ಹಣದುಬ್ಬರವು ಈ ತಾಳಿಕೆ ಮಿತಿಯೊಳಗೆಯೇ ಇದೆ. ಇದರಿಂದ ಆರ್​​ಬಿಐ ತನ್ನ ಬಡ್ಡಿದರಗಳನ್ನು ಇಳಿಸುವಂತಹ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries