ತಿರುವನಂತಪುರಂ: ರಾಜ್ಯ ಪೊಲೀಸ್ ಪಡೆಯ ದಕ್ಷತೆ ಮತ್ತು ಮೂಲಸೌಕರ್ಯವನ್ನು ಹೆಚ್ಚಿಸುವ ಮತ್ತು ಬಳಕೆಯಲ್ಲಿಲ್ಲದ ವಾಹನಗಳನ್ನು ಹಂತಹಂತವಾಗಿ ಬದಲಾಯಿಸುವ ಭಾಗವಾಗಿ ಖರೀದಿಸಿದ ಹೊಸ ವಾಹನಗಳಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹಸಿರು ನಿಶಾನೆ ತೋರಿದರು.
ತಿರುವನಂತಪುರಂನ ಎಸ್.ಎ.ಪಿ. ಪೆರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪಡೆ ಹೊಸದಾಗಿ ಖರೀದಿಸಿದ 241 ವಾಹನಗಳನ್ನು ಉದ್ಘಾಟಿಸಲಾಯಿತು.
ಬೊಲೆರೋಗಳು, ಮಧ್ಯಮ ಮತ್ತು ಭಾರೀ ಬಸ್‍ಗಳು ಸೇರಿದಂತೆ ವಿವಿಧ ರೀತಿಯ ವಾಹನಗಳಿಗೆ ಇಂದು ಚಾಲನೆ ನೀಡಲಾಯಿತು.
ಇವುಗಳನ್ನು ವಿವಿಧ ಪೆÇಲೀಸ್ ಠಾಣೆಗಳು, ನಿಯಂತ್ರಣ ಕೊಠಡಿಗಳು, ಕಾನೂನು ಮತ್ತು ಸುವ್ಯವಸ್ಥೆ ಡಿವೈಎಸ್‍ಪಿ ಮತ್ತು ಎಸಿ ಕಚೇರಿಗಳು, ರಾಜ್ಯ ವಿಶೇಷ ಶಾಖೆ, ಅಪರಾಧ ಶಾಖೆ, ಬೆಟಾಲಿಯನ್‍ಗಳು, ತ್ವರಿತ ಪ್ರತಿಕ್ರಿಯೆ ತಂಡ, ಬಾಂಬ್ ಸ್ಕ್ವಾಡ್ ಮತ್ತು ಸಂಚಾರದ ಅಗತ್ಯಗಳಿಗಾಗಿ ಬಳಸಲಾಗುತ್ತದೆ.
ಎಸ್‍ಎಪಿ ಪೆರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಪೆÇಲೀಸ್ ಮುಖ್ಯಸ್ಥ ಶೇಖ್ ದರ್ವೇಶ್ ಸಾಹಿಬ್, ಡಿಜಿಪಿ ನಿತಿನ್ ಅಗರ್ವಾಲ್, ಎಡಿಜಿಪಿ (ಪ್ರಧಾನ ಕಚೇರಿ) ಎಸ್ ಶ್ರೀಜಿತ್, ಎಡಿಜಿಪಿ (ಎಲ್ & ಒ) ಎಚ್ ವೆಂಕಟೇಶ್ ಮತ್ತು ಪೆÇಲೀಸ್ ಪ್ರಧಾನ ಕಚೇರಿ ಮತ್ತು ಜಿಲ್ಲೆಯ ಇತರ ಹಿರಿಯ ಪೆÇಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.





